ಚೆಯ್ಯಂಡಾಣೆ, ಏ. ೨೧: ಎಡಪಾಲದ ಸಮಸ್ತ ಎಸ್‌ವೈಎಸ್ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಶಾಖೆಯ ವತಿಯಿಂದ ಈದುಲ್ ಫಿತರ್ ಹಬ್ಬದ ಪ್ರಯುಕ್ತ ಈದ್ ಕಿಟ್ಟನ್ನು ಎಡಪಾಲ ಹಾಗೂ ಕಿಕ್ಕರೆ ಗ್ರಾಮಗಳಲ್ಲಿ ವಿತರಿಸಲಾಯಿತು.

ವಿತರಣಾ ಕಾರ್ಯಕ್ರಮವನ್ನು ಮೊಹಲ್ಲಾ ಖತೀಬರಾದ ಶೈಖುನಾ ನಿಝಾರ್ ಫೈಝಿ ಅವರು ಅಂಡತ್‌ಮಾನಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಉದ್ಘಾಟಿಸಿದರು. ಸ್ಥಳೀಯ ಎಡಪಾಲ ಹಾಗೂ ಕಿಕ್ಕರೆಯಸುಮಾರು ೨೩೦ ಮನೆಗಳಿಗೆ ಈದುಲ್ ಫಿತರ್ (ಈದ್) ಹಬ್ಬಕ್ಕೆ ಬೇಕಾದ ಆಹಾರ ಧಾನ್ಯಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಸ್ತ ಎಸ್‌ವೈಎಸ್, ಎಸ್‌ಕೆಎಸ್‌ಎಸ್‌ಎಫ್, ಕ್ಯಾಂಪಸ್ ವಿಂಗ್, ಎಸ್‌ಕೆಎಸ್‌ಬಿವಿ ಪದಾಧಿಕಾರಿಗಳು, ಕಾರ್ಯಕರ್ತರು, ಪೋಯಪಳ್ಳಿ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು ಹಾಗೂ ಮತ್ತಿತರರಿದ್ದರು.