ಮಡಿಕೇರಿ, ಏ.೨೧ : ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇಂದು ಬೆಳಿಗ್ಗೆ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ನಾಡಿಗೆ ವರುಣನ ಅವಕೃಪೆ ಆಗಿದ್ದು ಜೀವರಾಶಿಗಳಿಗೆ ತೊಂದರೆ ಆಗುತ್ತಾ ಇದ್ದು, ಬೆಳೆ ನಷ್ಟ, ಕುಡಿಯುವ ನೀರಿನ ಬವಣೆಯೂ ತಲೆದೋರಿದೆ. ಜಿಲ್ಲೆಗೆ ಮಾತ್ರವಲ್ಲದೆ ಮಡಿಕೇರಿ ನಗರದಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇದನ್ನು ಮನಗಂಡು ಕೊನೆಗೆ ದೇವರ ಮೊರೆ ಹೋಗುವುದೊಂದೆ ದಾರಿ ಎಂದು ಭಾವಿಸಿ ಇಂದು ಮಡಿಕೇರಿಯ ಸದ್ಭಕ್ತರಿಂದ ಎಳನೀರು ಅಭಿಷೇಕ, ಕ್ಷೀರಾಭಿಷೇಕ ಇತ್ಯಾದಿ ಸೇವೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಪ್ರಮುಖರಾದ ಅರುಣ್ ಕುಮಾರ್ ಸೋಮಯಾಜಿ, ಕೆ. ಜಿ. ಬೋಪಯ್ಯ, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಕವನ್ ಕಾವೇರಪ್ಪ, ಅನಿತಾ ಪೂವಯ್ಯ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ, ಶಿಲ್ಪಾ ರೈ, ಜಿ.ರಾಜೇಂದ್ರ, ಸಂಪತ್ ಕುಮಾರ್ ಮತ್ತಿತರರು ಹಾಜರಿದ್ದರು.