ಮಡಿಕೇರಿ, ಏ. ೨೧: ಈದುಲ್ ಫಿತ್ರ್ ಪ್ರಯುಕ್ತ ವೀರಾಜಪೇಟೆ ನಗರದ ಸುತ್ತಮುತ್ತಲಿನ ಮಸೀದಿ ಮತ್ತು ಈದ್‌ಗಾಹ್‌ಗಳಲ್ಲಿ ನಮಾಝ್ ಹಾಗೂ ಈದ್ ಪ್ರವಚನ ತಾ. ೨೨ ರಂದು (ಇಂದು) ನಡೆಯಲಿದೆ.
ನಗರದ ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಬೆಳಿಗ್ಗೆ ೯ ಗಂಟೆಗೆ ಮೌ|| ರವೂಫ್ ಹುದವಿಯವರ ನೇತೃತ್ವದಲ್ಲಿ, ಖಾಸಗಿ ಬಸ್ ನಿಲ್ದಾಣ ಸಮೀಪದ ಶಾದುಲಿ ಜುಮಾ ಮಸೀದಿಯಲ್ಲಿ ಮೌ||. ಅಬ್ದುಲ್ಲಾ ಉಸ್ತಾದ್ ರವರ ನೇತೃತ್ವದಲ್ಲಿ ಬೆಳಿಗ್ಗೆ ೯ ಗಂಟೆಗೆ, ಗಡಿಯಾರ ಕಂಬ ಹತ್ತಿರದ ನವಾಯತಿ ಮುರುಡೇಶ್ವರ್ ಜಮಾಅತ್ ಮಸೀದಿಯಲ್ಲಿ ಬೆಳಿಗ್ಗೆ ೮ ಗಂಟೆಗೆ ಮೌ|| ಮಖ್ಸೂದ್ ಅಹಮದ್ ನೇತೃತ್ವದಲ್ಲಿ ಕಲ್ಲುಬಾಣೆಯ ಬದ್ರಿಯಾ ಮಸೀದಿಯಲ್ಲಿ ಮುತ್ತಲಿಬ್ ಅನ್ವರಿ ನೇತೃತ್ವದಲ್ಲಿ ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ.
ವೀರಾಜಪೇಟೆ ಗೋಣಿಕೊಪ್ಪ ರಸ್ತೆಯ ಬ್ರೆöÊಟ್ ಕ್ಯಾಂಪಸ್ ಈದ್‌ಗಾಹ್‌ನಲ್ಲಿ ಬೆಳಿಗ್ಗೆ ೭.೩೦ ಗಂಟೆಗೆ ಮುಹಮ್ಮದ್ ಫಾಸಿಲ್ ಉಳಿಯಿಲ್ ಹಾಗೂ ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿಯ ಆವರಣದ ಈದ್‌ಗಾಹ್‌ನಲ್ಲಿ ಸನೋಫರ್ ಮೌಲವಿಯವರ ನೇತೃತ್ವದಲ್ಲಿ ಬೆಳಿಗ್ಗೆ ೭.೩೦ ಗಂಟೆಗೆ ನಮಾಝ್ ಹಾಗೂ ಪ್ರವಚನ ನಡೆಯಲಿದೆ. ಈ ಈದ್‌ಗಾಹ್‌ಗಳಲ್ಲಿ ಮಹಿಳೆಯರಿಗೂ ಪ್ರವಚನ ಹಾಗೂ ನಮಾಝ್‌ಗೆ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ.