ಕಣಿವೆ, ಏ. ೨೦: ಸುತ್ತಲೂ ಸುಂದರವಾದ ಹಾಗೂ ಸುಮಧುರವಾದ ಹಸಿರ ಗಿಡ-ಮರಗಳು, ಹಳ್ಳ-ಕೊಳ್ಳ, ಕೆರೆಗಳು ಮತ್ತು ನದಿಗಳನ್ನು ಹೊಂದಿರುವ ಕೊಡಗು ಜಿಲ್ಲೆ ಈ ಬಾರಿಯ ಬಿಸಿಲ ತಾಪಕ್ಕೆ ಸಿಲುಕಿ ಬೇಯುತ್ತಿದೆ.
ಗಿಡ-ಮರಗಳು ಹಾಗೂ ನದಿಗಳು ಇಲ್ಲದ ಬಯಲು ನಾಡಿನ ಜನರ ಸ್ಥಿತಿ ಈ ಬೇಸಿಗೆಯ ಆರಂಭದ ಬಿಸಿಲಿಗೆ ಇನ್ಯಾವ ರೀತಿ ಇರುತ್ತವೆ ಕಲ್ಪನೆಗೂ ನಿಲುಕದು. ಕಳೆದ ಹಲವು ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಬೇಸಿಗೆಯ ಆರಂಭದಲ್ಲಿನ ಬಿಸಿಲ ಬೇಗೆ ಧರೆಯನ್ನು ಸುಡುತ್ತಿದೆ. ಇದರಿಂದಾಗಿ ಧಗೆ ಏರುಗತಿಯಿಲ್ಲಿದ್ದು ಎಳೆಯ ಕಂದಮ್ಮಗಳು, ವೃದ್ಧರು, ಮನೆಗಳಲ್ಲಿ ಸಾಕುವ ಸಾಕು ಪ್ರಾಣಿಗಳ ಸ್ಥಿತಿ ನಿಜಕ್ಕೂ ಕ್ಲಿಷ್ಟಕರವಾಗುತ್ತಿದೆ.
ಬೆಳಗಾಯಿತು ಎಂದರೆ ಸಾಕು ನೆತ್ತಿ ಸುಡುವ ಸೂರ್ಯನ ಕಿರಣಗಳು ಸಂಜೆ ಆರು ಗಂಟೆ ಕಳೆದರೂ ಕೂಡ ಕಳೆಗುಂದುತ್ತಲೇ ಇಲ್ಲ. ಈಗ ಹೇಳಿ ಕೇಳಿ ಅಭಿವೃದ್ಧಿ ಹೆಸರಿನಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಂತು ಭೂಮಿಗೆ ನೆರಳು ನೀಡುತ್ತಿದ್ದ ಗಿಡ-ಮರಗಳನ್ನು ಕಡಿದುರುಳಿಸಿ ಆ ಜಾಗದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸುತ್ತಿದ್ದೇವೆ. ಇದು ಮತ್ತಷ್ಟು ತಾಪಮಾನವನ್ನು ಹೆಚ್ಚಿಸುತ್ತಿದೆ.
ಓಜೋನ್ ಪದರ ನಾಶ
ಭೂಮಿಯನ್ನು ಗುಬ್ಬಚ್ಚಿ ಗೂಡಿನಂತೆ ರಕ್ಷಿಸುತ್ತಿದ್ದ ಓಜೋನ್ ಪದರ ಹಾಳಾಗಿರುವುದು ತಾಪಮಾನ ಹೆಚ್ಚಾಗಲು ಕಾರಣವಾಗಿದೆ. ಸೂರ್ಯನ ಮೇಲ್ಮೆöÊನಲ್ಲಿ ಅಂದಾಜು ೫೫೦೦ ರಿಂದ ೬೦೦೦ ಡಿಗ್ರಿ ತಾಪಮಾನವಿರುತ್ತದೆ ಎಂದು ನಾಸಾ ಅಂದಾಜಿಸುತ್ತದೆ. ಇಷ್ಟೊಂದು ತೀವ್ರತೆಯ ಕಿರಣಗಳನ್ನು ತಡೆದುಕೊಳ್ಳುವ ಶಕ್ತಿ ಭೂಮಿಗೂ ಇಲ್ಲ. ನಮಗೆ ಮೊದಲೇ ಇಲ್ಲ.
ಭೂಮಿಯಿಂದ ಸುಮಾರು ೧೫ ರಿಂದ ೩೫ ಕಿಲೋಮೀಟರ್ ವ್ಯಾಪ್ತಿಯಲ್ಲಿ ಓಜೋನ್ ಪದರ ನಿರ್ಮಾಣವಾಗಿರುತ್ತದೆ. ಇಲ್ಲಿ ಏರೋಸಾಲ್ಸ್ಗಳು, ಸಾರಜನಕ, ಆಮ್ಲಜನಕ, ಸಣ್ಣ ಧೂಳಿನ ಕಣಗಳು, ಉಪಯುಕ್ತ ಅನಿಲಗಳು ಶೇಖರವಾಗಿರುತ್ತವೆ.
ಈ ಓಜೋನ್ ಪದರದಲ್ಲಿರುವ ಏರೋಸಾಲ್ಸ್ಗಳು ಹಾಗೂ ಧೂಳಿನ ಕಣಗಳು ಶೇ. ೩೨ ಪ್ರತಿಶತ ಬೆಳಕಿನ ತೀವ್ರತೆಯನ್ನು ತಡೆಗಟ್ಟುತ್ತವೆ. ಹಾಗೆಯೇ ಸಾರಜನಕ, ಆಮ್ಲಜನಕ, ಗಾಳಿಯ ಜೊತೆ ಸಂಚರಿಸುವ ಸಣ್ಣ ಸಣ್ಣ ಕಣಗಳು, ಹಾಗೂ ತೇವಾಂಶವು ಶೇ. ೫ ರಿಂದ ಶೇ. ೮ ರಷ್ಟು ಬೆಳಕಿನ ತೀವ್ರತೆಯನ್ನು ತಡೆಗಟ್ಟುತ್ತವೆ.
ಈ ಕ್ರಿಯೆಯಿಂದ ತೀವ್ರವಾದ ಬೆಳಕು ಹಿಂದಕ್ಕೆ ಪ್ರತಿಫಲನವಾಗುತ್ತದೆ. ಈ ಪ್ರಕ್ರಿಯೆಯಿಂದ ಭೂಮಿಯ ಮೇಲಿನ ಜೀವಸಂಕುಲವು ತಡೆದುಕೊಳ್ಳುವಷ್ಟು ತಾಪಮಾನವನ್ನು ಓಜೋನ್ ಪದರದ ರಕ್ಷಣಾ ಕವಚದ ಮೂಲಕ ಭೂಮಿ ಪಡೆದುಕೊಂಡAತಾಗುತ್ತದೆ.
ಜೊತೆಗೆ ಓಜೋನ್ ಪದರವು ಯುವಿ ಬೆಳಕಿನ ವಿಕಿರಣವನ್ನು ಹೀರಿಕೊಂಡು ಭೂಮಿ ಮೇಲೆ ಉಸಿರಾಡುವ ಜೀವ ಸಂಕುಲವನ್ನು ಕಾಪಾಡುತ್ತದೆ. ಆದರೆ ಇಂದು ಓಜೋನ್ ಪದರ ಶೇ. ೧೩ ರಷ್ಟು ಹಾಳಾಗಿದೆ.
ಇದರಿಂದಾಗಿ ತೀವ್ರವಾದ ಬೆಳಕು ಭೂಮಿಗೆ ನೇರವಾಗಿ ಧಾಳಿ ಇಡುತ್ತಿದೆ. ಹೀಗಾಗಿಯೇ ನಾವು ಹಿಂದೆAದೂ ಕಾಣದ ತಾಪಮಾನವನ್ನು ಅನುಭವಿಸುವಂತಹ ಅಪಾಯದ ಸ್ಥಿತಿಗೆ ತಲುಪುತ್ತಿದ್ದೇವೆ.
ಭಾರತದಲ್ಲಿ ಗರಿಷ್ಠ ೪೮ ಡಿಗ್ರಿ ತಾಪಮಾನ ದಾಖಲಾಗುತ್ತದೆ. ಇದೇ ಕಾರಣಕ್ಕಾಗಿಯೇ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸುತ್ತಿದೆ. ಜೊತೆಗೆ ಹಿಮಗಡ್ಡೆಗಳು ಕರಗುತ್ತಿವೆ. ಸಮುದ್ರದ ನೀರು ಸರಾಸರಿಗಿಂತ ಹೆಚ್ಚಾಗಿ ಆವಿಯಾಗುತ್ತಿದೆ. ಬಿಸಿ ಗಾಳಿ ಬೀಸುತ್ತಿದ್ದು ಇದರ ದುಷ್ಪರಿಣಾಮ ಅನೇಕ ಜಾತಿಯ ಪ್ರಾಣಿ - ಪಕ್ಷಿ ಸಂಕುಲಗಳು ನಶಿಸುತ್ತಿದ್ದು ವಿನಾಶದಂಚಿಗೆ ಹೋಗುತ್ತಿವೆ.
ಇಷ್ಟೆಲ್ಲಾ ಅನಾಹುತಗಳಿಗೆ ಕಾರಣಗಳೇನು ?
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೇ ಧರೆ ಹೊತ್ತಿ ಉರಿದರೆ ನಿಲ್ಲಬಹುದೇ... ಎಂಬ ಶರಣರ ವಾಣಿಯಂತೆ ಭೂಮಿಯನ್ನು ಸುಡುತ್ತಿರುವ ತಾಪಮಾನದ ಏರಿಕೆಯ ಕಾರಣಗಳನ್ನು ತಜ್ಞರು ಶೋಧಿಸಿದಾಗ ನಮ್ಮ ಐಷಾರಾಮಿಯಾದ ಆಧುನಿಕವಾದ ಜೀವನ ಶೈಲಿಯೇ ಕಾರಣ ಎಂಬುದಾಗಿದೆ.
ನಾವು ಈಗಾಗಲೇ ಉತ್ಪಾದಿ ಸಿರುವ ಹಾಗೂ ಉತ್ಪಾದಿಸುತ್ತಲೇ ಇರುವ ವಸ್ತುಗಳಿಂದ ಬಿಡುಗಡೆ ಯಾಗುವ ‘ಕಾರ್ಬನ್ ಡೈ ಆಕ್ಸೆöÊಡ್ ಹಾಗೂ ವಿಷಾನಿಲಗಳು ಈ ಅನಾಹುತಗಳಿಗೆ ಕಾರಣಗಳಾಗಿವೆ. ಪ್ರಾಣಿ ಹಾಗೂ ಸಸ್ಯಗಳಿಂದ ಹೊರಬರುವ ಅನಿಲಗಳು ಶೇ. ೬ ರಷ್ಟು ಮಾತ್ರ. ಇದು ಸ್ವಾಭಾವಿಕವಾಗಿ ನಡೆಯುವ ಪ್ರಕ್ರಿಯೆ ಆಗಿರುವುದರಿಂದ ಪ್ರಕೃತಿಯನ್ನು ಹಾನಿಗೊಳಿಸುವಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಮನುಷ್ಯನ ಹಸ್ತಕ್ಷೇಪವಿಲ್ಲದಿದ್ದರೆ ಪ್ರಕೃತಿ ತನ್ನ ಸಮತೋಲನವನ್ನು ಪ್ರತಿ ಕ್ಷಣವೂ ತಾನೇ ಕಾಪಾಡಿಕೊಳ್ಳುತ್ತಿರುತ್ತದೆ. ಇಲ್ಲಿ ಸಮಸ್ಯೆ ಇರುವುದು ಮಾನವನ ದುರಾಸೆಯಿಂದ ತಯಾರಾಗುತ್ತಿರುವ ವಿಷಾನಿಲಗಳ ಪ್ರಮಾಣದಲ್ಲಿ.
ಅದು ಶೇ. ೯೪ ರಷ್ಟಿದೆ
ಓಜೋನ್ ಪದರವನ್ನು ಹಾಳು ಮಾಡುತ್ತಿರುವ ಪ್ರಮುಖವಾದ ವಿಷಾನಿಲಗಳು ಎಂದರೆ ಕಾರ್ಬನ್ ಡೈ ಆಕ್ಸೆöÊಡ್, ಮಿಥೇನ್, ನೈಟ್ರಸ್ ಆಕ್ಸೆöÊಡ್, ಹೈಡ್ರೋಪ್ರೋರೋ ಕಾರ್ಬನ್ಸ್ ಮತ್ತು ಸಲ್ಫರ್ ಹೆಕ್ಸಾಪ್ಲೋರೈಡ್. ಈ ಅನಿಲಗಳು ವಾಹನಗಳ ಬಳಕೆಯಿಂದ ಹೆಚ್ಚಾಗಿ ಉತ್ಪತ್ತಿಯಾಗುತ್ತಿವೆ.
ಪ್ಲಾಸ್ಟಿಕ್ ಉತ್ಪತ್ತಿ ಹಾಗೂ ಅದು ಕೊಳೆಯದೇ ಇರುವುದರಿಂದ ತ್ಯಾಜ್ಯಗಳನ್ನು ಸುಡುವುದರಿಂದ ಬಿಡುಗಡೆಯಾಗುತ್ತಿರುವ ಕಾರ್ಬನ್, ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ತಯಾರಿಕೆ, ಬಳಕೆಯಿಂದ ಹೊರಬರುತ್ತಿರುವ ನೈಟ್ರಸ್ ಆಕ್ಸೆöÊಡ್, ರೆಫ್ರಿಜರೇಟ್ಗಳು, ಹವಾ ನಿಯಂತ್ರಣಗಳು, ಪೋಮ್ಗಳು ಮೊದಲಾದವುಗಳಿಂದ ಹೊರಬರುತ್ತಿರುವ ಹೈಡ್ರೋಪ್ರೋರೋ ಕಾರ್ಬನ್ಸ್ ಹೀಗೆ ಪ್ರತಿಯೊಂದು ವಿಷಾನಿಲಗಳನ್ನು ಉತ್ಪಾದಿಸುತ್ತಿರುವ ಮನುಷ್ಯನೇ ಅಪರಾಧಿ ಸ್ಥಾನದಲ್ಲಿದ್ದಾನೆ. ಹಾಗಾಗಿ ಪ್ರತಿ ವರ್ಷವೂ ವಿಷಾನಿಲಗಳ ಉತ್ಪಾದನೆ ಹೆಚ್ಚುತ್ತಿದೆಯಲ್ಲಾ ಇನ್ನು ತಾಪಮಾನ ಕಡಿಮೆಯಾಗಿಸುವುದು ಇನ್ನೆಲ್ಲಿಯ ಮಾತು? ವಿಷಾನಿಲಗಳನ್ನು ಉತ್ಪಾದಿಸುತ್ತಿರುವ ದೇಶಗಳ ಪೈಕಿ ಭಾರತ ದೇಶ ನಾಲ್ಕನೇ ಸ್ಥಾನದಲ್ಲಿದೆ.
೨೦೧೮ ರಲ್ಲಿ ೨೨೩೩ ಮಿಲಿಥಿನ್ ಟನ್ನಷ್ಟು ಕಾರ್ಬನ್ ಉತ್ಪಾದಿಸಿದ್ದ ಭಾರತದಲ್ಲಿ ೨೦೧೯ ರಲ್ಲಿ ಅಂದಾಜು ಶೇ. ೮ ರಷ್ಟು ಜಾಸ್ತಿಯಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ತಾಪಮಾನವನ್ನು ನಿಯಂತ್ರಿಸದೆ ಹೋದರೆ ಭಾರತದಲ್ಲಾಗುವ ದುಷ್ಪರಿಣಾಮಗಳನ್ನು ಪಟ್ಟಿ ಮಾಡುವುದಾದರೆ ಮೊದಲಿಗೆ ನಮ್ಮನ್ನು ಕಾಡುವ ಭೀತಿ ಕರಗುತ್ತಿರುವ ಹಿಮಾಲಯ ಪರ್ವತಗಳು ಹಿಮಾಲಯ ಪರ್ವತದಲ್ಲಿರುವ ಹಿಮಗಡ್ಡೆಗಳು ೧೯೭೫ ರಿಂದ ೨೦೦೦ನೇ ಇಸವಿಯವರೆಗೆ ಶೇ. ೯ ರಷ್ಟು ಕರಗಿವೆ.
೨೦೦೦ ರಿಂದ ೨೦೧೬ ರವರೆಗೆ ಶೇ. ೭ ರಷ್ಟು ಕರಗಿವೆ. ಕೇವಲ ಕಳೆದ ಎರಡೇ ವರ್ಷಗಳಲ್ಲಿ ಶೇ. ೮ ರಷ್ಟು ಕರಗಿವೆ. ೨೧೦೦ನೇ ಇಸವಿ ವೇಳೆಗೆ ಹಿಮಾಲಯದ ಗಡ್ಡೆಗಳು ಸಂಪೂರ್ಣವಾಗಿ ಕರಗಿ ನೀರಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಹ ಹಾಗೂ ಭಾರತದೆಲ್ಲೆಡೆ ಹಿಮ ಮಳೆಯಾಗುವ ಕುರಿತು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದು ಕಡೆ ಅಷ್ಟೂ ಪ್ರಮಾಣದ ನೀರು ಎಲ್ಲವನ್ನು ಕೊಚ್ಚಿಕೊಂಡು ಸಮುದ್ರ ಸೇರಿ ಸಮುದ್ರದ ಮಟ್ಟ ಹೆಚ್ಚಾಗುತ್ತದೆ. ಮತ್ತು ಉಳಿದ ನೀರನ್ನು ತಡೆದುಕೊಳ್ಳುವ ಶಕ್ತಿ ಸಮುದ್ರಕ್ಕಿಲ್ಲ.
ಹಾಗಾಗಿ ದಕ್ಷಿಣ ಭಾರತದ ಶೇ. ೩೫ ರಿಂದ ೪೦ ಪ್ರತಿಶತ ಭೂಪ್ರದೇಶ ಜಲಾವೃತಗೊಳ್ಳುತ್ತದೆ. ನೀರಿನ ಭಾರಕ್ಕೆ ಸಮುದ್ರದಲ್ಲಿ ಭೂ ಕುಸಿತ ಉಂಟಾಗುವ ಮೂಲಕ ಸುನಾಮಿ ಅಲೆಗಳು ಅಪ್ಪಳಿಸುತ್ತವೆ. ಸೈಕ್ಲೋನ್ ಎಫೆಕ್ಟ್ ಹೆಚ್ಚಾಗುತ್ತಾ ಹೋಗುತ್ತದೆ.
ಪ್ರಕೃತಿ ಮುನಿಸಿಕೊಂಡರೆ ಏನೆಲ್ಲಾ ಸಂಭವಿಸುತ್ತದೆ ಎನ್ನುವು ದನ್ನು ಪ್ರತ್ಯಕ್ಷವಾಗಿ ಅನುಭವಿಸಿದ್ದೇವೆ. ಕಳೆದ ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ಅನಾವೃಷ್ಟಿಯನ್ನು ಸ್ಮರಿಸಬಹುದಾಗಿದೆ. ಹಾಗಾಗಿ ಇರುವುದೊಂದೆ ಭೂಮಿ ಅದನ್ನು ನಾವು ಜತನವಾಗಿ ಕಾಪಾಡುವ ಮತ್ತು ಸಂರ ಕ್ಷಿಸುವ ಮೂಲಕ ಉಳಿಸಿಕೊಂಡು ನಾವು ಕೂಡ ಉಳಿಯಬೇಕಿದೆ. - ಕೆ.ಎಸ್. ಮೂರ್ತಿ