ಪೊನ್ನಂಪೇಟೆ, ಏ. ೨೧: ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆದ ಐನಂಡ ಕುಟುಂಬದ ೨೬ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಚಟ್ಟಂಡ ಲೇಪಾಕ್ಷಿ (ತಾಮನೆ ಐನಂಡ) ಕಾವೇರಿ ಕಾಲೇಜಿನಲ್ಲಿ ಎನ್‌ಸಿಸಿಯಲ್ಲಿ ಲೆಫ್ಟಿನೆಂಟ್ ಶ್ರೇಣಿಯ ಅಧಿಕಾರಿ ಯಾಗಿ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿಯವರ ಕಮಾಂ ಡೇಷನ್ ಪ್ರಶಸ್ತಿಯನ್ನು ಪಡೆದ ನಿಟ್ಟಿನಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಪೆಮ್ಮಯ್ಯ ಅವರ ನಿಧನ ಹಿನ್ನೆಲೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕುಟುಂಬದ ಹಿರಿಯರಾದ ಐನಂಡ ಕೆ. ಮಂದಣ್ಣ ಅವರನ್ನು ಸಮಾರಂಭದಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಭವಾನಿ ಧನು ಪ್ರಾರ್ಥಿಸಿ, ಪ್ರಕಾಶ್ ಗಣಪತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.