ಮಡಿಕೇರಿ, ಏ. ೨೦: ವಿಧಾನಸಭಾ ಚುನಾವಣೆ ಹಿನ್ನೆಲೆ ಚಾಲ್ತಿಯಲ್ಲಿರುವ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಚುನಾವಣಾಧಿಕಾರಿಯಿಂದ ಅನುಮತಿಯನ್ನು ಪಡೆಯದೆ ವಾಟ್ಸಪ್ ಗ್ರೂಪ್‌ನಲ್ಲಿ ಅಭ್ಯರ್ಥಿ ಪರ ಮತ ಪ್ರಚಾರ ಮಾಡಿದ ಹಿನ್ನೆಲೆ ಅಡ್ಮಿನ್‌ಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ. ಯತೀಶ್ ಉಲ್ಲಾಳ್ ನೋಟೀಸ್ ಜಾರಿಗೊಳಿಸಿದ್ದಾರೆ.
‘ಕೊಡಗಿನ ಸುದ್ದಿಜಾಲ’ ಎಂಬ ವಾಟ್ಸಪ್ ಗ್ರೂಪ್‌ನ ಅಡ್ಮಿನ್ ರವಿಗೌಡ ಎಂಬವರು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್‌ಗೌಡ ಪರ ಯಾವುದೇ ಪೂರ್ವಾನುಮತಿ ಪಡೆಯದೆ ಪ್ರಚಾರದ ಅಂಶವುಳ್ಳ ಪೋಸ್ಟ್ ಅನ್ನು ಹಂಚಿಕೊAಡಿರುವುದು ಕಾನೂನು ಪ್ರಕಾರ ತಪ್ಪು. ಈ ಕುರಿತು ೨೪ ಗಂಟೆಯೊಳಗೆ ಉತ್ತರಿಸುವಂತೆ ತಿಳಿಸಿ ನೋಟೀಸ್ ಜಾರಿಗೊಳಿಸಿದ್ದಾರೆ.