ಮಡಿಕೇರಿ, ಏ. ೨೦: ಗುರುವಾರ ರಾತ್ರಿ ಶವ್ವಾಲ್ ತಿಂಗಳ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ತಾ. ೨೨ ರಂದು (ನಾಳೆ) ಈದುಲ್ ಫಿತ್ರ್ (ರಂಜಾನ್) ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಡಗಿನ ಉಭಯ ಉಪ ಖಾಝಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.