ವಿಶ್ವದೆಲ್ಲೆಡೆ ಇತ್ತೀಚಿನ ವಿದ್ಯಮಾನಗಳು ಭೂಮಿಯ ಅಸ್ಥಿತ್ವಕ್ಕೆ ಸಂಚಕಾರವೆAಬAತೆ ಆತಂಕ ಮೂಡಿಸ ತೊಡಗಿದೆ. ಶುದ್ಧ ನೆಲ, ಜಲ ಗಾಳಿ, ಆಹಾರದೊಂದಿಗೆ ಮಾನವ, ಪ್ರಾಣಿ, ಪಕ್ಷಿ, ಸಸ್ಯ, ಸೂಕ್ಷಾö್ಮಣು, ಕೀಟ, ಜೀವ ಸಂಕುಲಗಳಿಗೆ ಬದುಕು ಕಟ್ಟಿಕೊಡುತ್ತಿರುವ ‘ಭೂಮಾತೆ’ಯ ಉಳಿವಿಗೆ ಗಂಡಾAತರವೆನ್ನುವAಥ ವಿಷಮಯ ಸನ್ನಿವೇಶ ಎದುರಾಗಿದೆ.
‘ಮೌಢ್ಯದಿಂದ ಯಾವ ಮರದ ಕೊಂಬೆಗಳನ್ನು ಕಡಿದು ಬರಿದು ಮಾಡಿದೆನೋ, ಆಯಾಸದಿಂದ ಈಗ ಅದೇ ಮರದ ನೆರಳು ಆಶ್ರಯಿಸಿ ಬಂದಿದ್ದೇನೆ’ ಎಂಬ ಚಾರುದತ್ತನ ನುಡಿಗಳು ಮತ್ತು ಎಲ್ಲರ ಆಸೆಗಳನ್ನು ಈಡೇರಿಸುವ ಶಕ್ತಿ ನಿಸರ್ಗಕ್ಕೆ ಇದೆ; ಆದರೆ, ಎಲ್ಲರ ದುರಾಸೆಗಳನ್ನಲ್ಲ ಎಂಬ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ನುಡಿಗಳ ನಿಜ ಅರ್ಥ ವೇದ್ಯವಾಗತೊಡಗಿದೆ.
ವಿಶ್ವದ ನಾನಾ ಕಡೆ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಜಲಪ್ರಳಯ, ಭೂಕುಸಿತ, ಭೂಕಂಪ, ಬಿರುಗಾಳಿ, ತಾಪಮಾನ ಏರಿಕೆಯಿಂದ ಜೀವಸಂಕುಲ ಮತ್ತು ಭೂಮಿ ನಲುಗಿದೆ. ದೇಶಗಳ ನಡುವಿನ ವಿಷಮಯ ಪರಿಸ್ಥಿತಿ ಮತ್ತು ಕೆಲವು ರಾಷ್ಟçಗಳ ಯುದ್ಧೋನ್ಮಾದ ಭೂಮಿಯ ಉಳಿವಿನ ಬಗ್ಗೆ ಪ್ರಶ್ನೆ ಹುಟ್ಟುಹಾಕತೊಡಗಿವೆ.
ನಾಗರೀಕತೆ ಬೆಳೆದಂತೆ ನಗರೀಕರಣ, ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳು, ಆಧುನೀಕರಣ, ಆರ್ಥಿಕ ವ್ಯವಸ್ಥೆಯ ಜಾಗರೀಕರಣದಿಂದ ಮನುಷ್ಯನ ದುರಾಸೆ ಹೆಚ್ಚತೊಡಗಿ, ಪರಿಸರ ನಾಶ ಅವ್ಯಾಹತವಾಗಿ ಮುಂದುವರಿದಿರುವುದು, ಕಳೆದ ಒಂದೆರೆಡು ದಶಕಗಳಲ್ಲಿ ಭೂಮಿಯ ತಾಪಮಾನದಲ್ಲಿ ವಿಪರೀತ ಏರುಪೇರುಗಳಿಗೆ ಕಾರಣವಾಗಿದೆ. ಒಂದೆಡೆ ಪ್ರಚಂಡ ಚಳಿ, ಮತ್ತೊಂದೆಡೆ ವಿಪರೀತ ಮಳೆ, ಇನ್ನೊಂದೆಡೆ ಬಿಸಿಲ ಧಗೆಯಿಂದ ಜೀವರಾಶಿ ಭಣಗುಟ್ಟುವಂತಾಗಿದೆ.
ಜಾಗತಿಕ ತಾಪಮಾನ ಏರಿಕೆ, ನಿತ್ಯ ನಿರಂತರ ಪ್ರವಾಹದ ಪ್ರಕೋಪ, ಉತ್ತರಧ್ರುವ ಮತ್ತು ದಕ್ಷಿಣಧ್ರುವದ ಹಿಮದ ವಿಶಾಲ ಭಾಗಗಳ ಕರಗುವಿಕೆ, ನಮ್ಮ ದೇಶದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸಾವಿರಾರು ವರ್ಷಗಳಿಂದ ಹೆಪ್ಪುಗಟ್ಟಿರುವ ಹಿಮಚ್ಛಾದಿತ ಪ್ರದೇಶ ವೇಗವಾಗಿ ಕರಗತೊಡಗಿ ಉತ್ತರಭಾರತದಲ್ಲಿ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗತೊಡಗಿದೆ. ದಕ್ಷಿಣ ಭಾರತದಲ್ಲಿ ಪಶ್ವಿಮಘಟ್ಟದ ಅರಣ್ಯ ಪ್ರದೇಶ ನಾಶವಾಗ ತೊಡಗಿ, ರಬ್ಬರ್ ಬೆಳೆ ಹೆಚ್ಚತೊಡಗಿ, ಅಣೆಕಟ್ಟು ಮತ್ತು ಇತರ ಪ್ರದೇಶಗಳಿಗೆ ಅರಣ್ಯ
ನಾಶ ಹೇರಳವಾಗಿ, ಮಾನವ ವನ್ಯಜೀವಿ ಸಂಘರ್ಷಕ್ಕೂ ಎಡೆಯಾಗಿವೆ. ಪ್ರಾಕೃತಿಕ ಸಂಪನ್ಮೂಲ ನಾಶ, ಮಾಲಿನ್ಯ ಹೊರಸೂಸುವ ತೈಲದ ಬಳಕೆ, ಕಾಡು-ನದಿಗಳ ನಾಶ ಜೊತೆಗೆ ಅಣುವಿದ್ಯುತ್ ಬಳಕೆ, ವಿಶ್ವದ ಅಭಿವೃದ್ಧಿಯ ಸೂತ್ರವಾಗತೊಡಗಿ, ಭೂಮಿಯ ತಾಪಮಾನ ಹೆಚ್ಚ ತೊಡಗಿದೆ. ಭೂಮಿಯ ಮೇಲ್ಪದರದ ಅಲುಗಾಟ, ಭೂಫÀಲಕಗಳ ಸಂಘರ್ಷದಿAದ ಭೂಕಂಪ ಭೀತಿ, ಕೆಲವು ಅಡಿಗಳಿಂದ ಸಹಸ್ರಾರು ಅಡಿಗಳವರೆಗೆ ಭೂಮಿಯಲ್ಲಿ ಬಿರುಕು ಹಿಮಾಲಯ ಪ್ರದೇಶ ಸೇರಿದಂತೆ ಅನೇಕ ದೇಶಗಳಲ್ಲಿ ಮೂಡಿವೆ.
ನೆಮ್ಮದಿಯ ತಾಣವಾಗಿದ್ದ ಭೂಮಿ ಮಾನವನ ದುರಾಸೆಯಿಂದ ಹೀಗೆ ನಲುಗತೊಡಗಿರುವಾಗ, ಇತರ ಗ್ರಹಗಳಲ್ಲಿ ಜೀವಿಸಬಹುದೆ ? ಎನ್ನುವ ಪ್ರಶ್ನೆಗ ಉತ್ತರ ಕಂಡುಕೊಳ್ಳಲು ಮಾನವ ತನ್ನ ಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ ಪ್ರಯತ್ನಿಸಿದರೂ, ಆಶಾದಾಯಕ ಫಲಿತಾಂಶ ಲಭ್ಯವಾಗಿಲ್ಲ. ಹೀಗಿರುವಾಗ ಜೀವಸಂಕುಲ ಹೊಂದಿರುವ ಏಕೈಕ ಗ್ರಹ ಭೂಮಿಯ ಮಹತ್ವ ಸ್ಪಷ್ಟವಾಗುತ್ತದೆ.
ಇಂದು ವಿಶ್ವ ಭೂಮಿ ದಿನಾಚರಣೆ, ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ ಎನ್ನುವುದು ಕಳೆದ ವರ್ಷದಂತೆ ಈ ವರ್ಷವೂ ವಿಶ್ವಭೂಮಿ ದಿನಾಚರಣೆಯ ಧ್ಯೇಯ ವಾಕ್ಯ. ಪರಿಸರ ನಾಶ ಸಲ್ಲದು. ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯೊಂದಿಗೆ ಸ್ವಚ್ಛ ಪರಿಸರ ರೂಪಿಸಿ ಲಾಭದಾಯಕ ಆಹ್ಲಾದಕರ ಸನ್ನಿವೇಶ ನಿರ್ಮಾಣದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳುವ ಸಂದೇಶ ಇದರಲ್ಲಿ ಅಡಗಿದೆ.
ಅಮೇರಿಕದ ಗೆರಾಲ್ಡ್ ನೆಲ್ಸನ್ ಮತ್ತು ಜಾನ್ ಮೆಕ್ ಕಾನ್ನೆಲ್ ಅವರ ಪರಿಸರ ಜ್ಞಾನೋದಯ ಕಲ್ಪನೆಯೊಂದಿಗೆ ಈ ದಿನದ ಆಚರಣೆ ರೂಪು ತಳೆದಿದೆ. ಭೂ ಗ್ರಹದ ರಕ್ಷಣೆ ಮುಂದಿನ ಪೀಳಿಗೆಗೆ ಮಹತ್ತರ ಕೊಡುಗೆ ಎಂಬುದನ್ನರಿತು ಪರಿಸರ ರಕ್ಷಣೆಗೆ ತೊಡಗಿಸಿಕೊಳ್ಳಲು ಇದು ಸಕಾಲ.
ಪರಿಸರ ಪ್ರೀತಿಯೊಂದಿಗೆ, ಪರಿಸರದ ಜೊತೆ ಬೆರೆಯೋಣ, ಸಾವಯವ ಉತ್ಪನ್ನಗಳ ಬಳಕೆ ಹೆಚ್ಚಿಸೋಣ, ರಾಸಾಯನಿಕ ಬಳಕೆ ಕಡಿಮೆಯಾಗಿಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಿ ಬಳಸೋಣ. ಪ್ಲಾಸ್ಟಿಕ್ ಬಳಕೆ ಇಲ್ಲವಾಗಿಸಿ ಮರುಬಳಕೆಯ ವಸ್ತುಗಳನ್ನು ಉಪಯೋಗಿಸೋಣ. ಮರ-ಗಿಡ ಬಳಸಿ ಚಿಕ್ಕ ಚೊಕ್ಕ ಉದ್ಯಾನ ನಿರ್ಮಿಸೋಣ; ವಿಷಾನಿಲ ಹೊರ ಉಗುಳುವ ಇಂಧನ ಬಳಕೆಗೆ ನಿಯಂತ್ರಣ ಹಾಕೋಣ. ನಿರಂತರ ಅರಣ್ಯನಾಶ, ವಾಯು ಮಾಲಿನ್ಯ, ಶಬ್ದ ಮಾಲಿನ್ಯಗಳಿಗೆ ಕಡಿವಾಣ ಹಾಕೋಣ.
‘ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ; ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು; ಮದುವೆಗೋ-ಮಸಣಕೋ ಹೋಗೆಂದ ಕಡೆಗೋಡು; ಪದಕುಸಿಯೆ ನೆಲವಿಹುದು ಮಂಕುತಿಮ್ಮ’ ಎಂದಿದ್ದಾರೆ ಡಿವಿಜಿ. ಆದರೆ, ನೆಲ, ಕುಸಿಯೆ ಪದವೆಲ್ಲಿ ? ಎಂಬ ಪ್ರಶ್ನೆ ಮೂಡಿಕೊಂಡರೆ, ಭೂಮಿಯ ಮಹತ್ವ ಸ್ವಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಶ್ವಭೂಮಿ ದಿನಾಚರಣೆ ಕೇವಲ ಒಂದು ದಿನದ ಸಾಂಕೇತಿಕ ಕಾರ್ಯಕ್ರಮ ಆಗದಿರಲಿ, ಭೂಮಿಯನ್ನು ಹಾಳುಗೆಡವಲು ಪರೋಕ್ಷ ಹಾಗೂ ಪ್ರತ್ಯಕ್ಷ ಕಾರಣರಾಗಿರುವ ನಾವು ನಿತ್ಯ ನಿರಂತರ ಭೂ ರಕ್ಷಣೆಗೆ ಕಟಿಬದ್ಧರಾಗೋಣ. ಏನಂತೀರಿ ?
-ಕಲ್ಮಾಡಂಡ ದಿನೇಶ್ ಕಾರ್ಯಪ್ಪ,
ಮಡಿಕೇರಿ., ಮೊ: ೯೮೪೫೪೯೯೧೧೨