ವೀರಾಜಪೇಟೆ, ಏ. ೨೧: ವೀರಾಜಪೇಟೆ ನಾಡು ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವವು ತಾ. ೨೨ ರಿಂದ ೨೬ ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ತಾ. ೨೨ ರಂದು ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಪಟ್ಟಣಿ ಉತ್ಸವ, ತಾ. ೨೩ ದೊಡ್ಡ ಹಬ್ಬದಂದು ಎತ್ತು ಪೋರಾಟ, ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ನಡೆದು ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ. ತಾ. ೨೪ ಕುದುರೆ, ತಾ. ೨೫ ಕುಂದಚೂಳೆ, ತಾ. ೨೬ ರಂದು ಶುದ್ಧ ಕಲಶ ನಡೆಯಲಿದೆ.