ಮಡಿಕೇರಿ, ಏ. ೨೦: ಮುಂಬರುವ ವಿಧಾನಸಭಾ ಚುನಾವಣೆ ಸಂಬAಧ ನೀತಿ ಸಂಹಿತೆ ಉಲ್ಲಂಘನೆ ತಡೆಯಲೆಂದು ಕೊಡಗು ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾಗಿರುವ ತಪಾಸಣಾ ಚೆಕ್ ಪೋಸ್ಟ್ಗಳಲ್ಲಿ ಹಾಗೂ ವಿವಿಧ ಇಲಾಖೆಗಳು, ಪ್ಲೆöÊಯಿಂಗ್ ಸ್ಕಾ÷್ವ್ವಡ್, ಎಸ್.ಎಸ್.ಟಿ.ಗಳಿಂದ ಇದುವರೆಗೆ ರೂ. ೨೫ ಲಕ್ಷ ೫೨ ಸಾವಿರ ೫೩೨ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಆಗಿರುವ ಡಾ.ಬಿ.ಸಿ ಸತೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಟಾಟಿಕ್ ಸರ್ವೇಲೆನ್ಸ್ ತಂಡವು (ಎಸ್.ಎಸ್.ಟಿ) ಇದುವರೆಗೆ ರೂ.೨೫.೫೨ ಲಕ್ಷ ವಶಪಡಿಸಿಕೊಂಡಿದೆ. ಫ್ಲೈಯಿಂಗ್ ಸ್ಕ್ವಾಡ್, ಎಸ್.ಎಸ್.ಟಿ ತಂಡ ಈ ನಗದಿನ ಮೂಲ ದಾಖಲೆಗಳ ಪರಿಶೀಲನೆ ಬಳಿಕ ರೂ. ೧೭ ಲಕ್ಷ ೨೦ ಸಾವಿರದ ೧೮೨ ಬಿಡುಗಡೆಗೊಳಿಸಿದ್ದು, ಒಟ್ಟು ಬಾಕಿ ಉಳಿದಿರುವ ರೂ.೮ ಲಕ್ಷ ೩೨ ಸಾವಿರದ ೩೫೦ ಖಜಾನೆಯಲ್ಲಿ ಇರಿಸಲಾಗಿದ್ದು, ಎಫ್.ಐಆರ್ ದಾಖಲಿಸಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಒಬ್ಬರು ವೆಚ್ಚ ವೀಕ್ಷಕರನ್ನು ನೇಮಕಗೊಳಿಸಲಾಗಿದೆ. ೧೪ ಫ್ಲೆöÊಯಿಂಗ್ ಸ್ಕಾ÷್ವ್ವಡ್‌ಗಳನ್ನು, ೪೨ SSಖಿ (ಸ್ಟಾಟಿಕ್ ಸರ್ವೇಲೆನ್ಸ್ ತಂಡ) ರಚಿಸಲಾಗಿದೆ. ೮ ಅಬಕಾರಿ ತಂಡಗಳು ಕಾರ್ಯನಿರ್ವಹಿಸುತ್ತಿವೆ.

೧೯ ಸಾವಿರ ಲೀಟರ್ ಮದ್ಯ ವಶ

ಅಬಕಾರಿ ಇಲಾಖೆಯು ೧೯,೪೮೧.೨೫೫ ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಂಡಿದೆ. ಇದರ ಮೊತ್ತ ರೂ.೪೩,೮೮,೦೬೭ ಆಗಿದೆ. ಪೊಲೀಸ್ ಇಲಾಖೆಯು ರೂ.೩೨,೫೩೧ ಬೆಲೆ ಬಾಳುವ ೮೫.೦೧ ಲೀಟರ್ ಮದ್ಯ ವಶಕ್ಕೆ ಪಡೆದುಕೊಂಡಿದೆ.

ಅಬಕಾರಿ ಇಲಾಖೆಯು ೦.೦೪೫ ಕೆ.ಜಿ ಗಾಂಜಾ ಹಾಗೂ ಚರಸ್ ವಶ ಮಾಡಿದ್ದು, ಇದರ ಮೊತ್ತ ರೂ.೩ ಸಾವಿರವಾಗಿದೆ. ೨.೩೨ ಕೆ.ಜಿ ಗಾಂಜಾ, ೦.೦೪೧ ಗ್ರಾಮ್ ಎಂ.ಡಿ.ಎA.ಎ ಪೊಲೀಸ್ ಇಲಾಖೆ ವಶಪಡಿಸಿಕೊಂಡಿದ್ದು ರೂ.೨ ಲಕ್ಷದ ೯ ಸಾವಿರ ಇದರ ಬೆಲೆಯಾಗಿದೆ. ೧ ಲಕ್ಷ ೫೦ ಸಾವಿರ ಬೆಲೆಬಾಳುವ ೨೪೫ ಸೀರೆಗಳನ್ನೂ ಪೊಲೀಸ್ ಇಲಾಖೆ ಜಪ್ತಿ ಮಾಡಿದೆ.