ಕೂಡಿಗೆ, ಏ. ೨೧: ಜಿಲ್ಲೆಯಲ್ಲಿ ಜನವರಿ ತಿಂಗಳಿನಿAದ ಏಪ್ರಿಲ್ ತಿಂಗಳ ಒಳಗೆ ಮಳೆಯು ಬೀಳುವುದರ ಮೂಲಕ ಸ್ವಲ್ಪ ಪ್ರಮಾಣದಲ್ಲಿ ಬಿಸಿಲಿನ ತಾಪವನ್ನು ತಗ್ಗಿಸುತ್ತಿತ್ತು. ಆದರೆ ಈ ಸಾಲಿನಲ್ಲಿ ಜನವರಿಯಿಂದ ಇದುವರೆಗೂ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕೆಲ ಭಾಗದಲ್ಲಿ ಒಂದೆರಡು ಬಾರಿ ಸಣ್ಣ ಪ್ರಮಾಣದಲ್ಲಿ ಮಳೆ ಬಂದಿದ್ದನ್ನು ಬಿಟ್ಟರೆ ನಾಲ್ಕು ತಿಂಗಳುಗಳಿAದ ಸರಿಯಾಗಿ ಮಳೆ ಬಿದ್ದಿಲ್ಲ. ಇದರಿಂದಾಗಿ ತಾಪಮಾನವು ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ. ಅಲ್ಲದೆ ಈ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಪ್ರಮಾಣದಲ್ಲಿ ಬಾರಿ ಕಡಿಮೆಯಾಗಿದ್ದು, ಈ ವ್ಯಾಪ್ತಿಯ ರೈತರು ಕಂಗಾಲಾಗಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ೧೫ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನೂರಾರು ಉಪ ಗ್ರಾಮಗಳಲ್ಲಿ ಈ ಸಾಲಿನಲ್ಲಿ ರೈತರು ಕೊಳವೆ ಬಾವಿಯನ್ನು ನಂಬಿಕೊAಡು ವಾಣಿಜ್ಯ ಬೆಳೆಯಾದ ಶುಂಠಿ ಬೇಸಾಯವನ್ನು ವರ್ಷಂಪ್ರತಿಯAತೆ ಜನವರಿ ತಿಂಗಳಿನಿAದ ಸಣ್ಣ ಪ್ರಮಾಣದಲ್ಲಿ ಬೇಸಾಯ ಮಾಡಿರುತ್ತಾರೆ. ಆದರೆ ಈ ಸಾಲಿನಲ್ಲಿ ಮಳೆಯೇ ಬೀಳದ ಕಾರಣದಿಂದಾಗಿ ಅಂತರ್ಜಲ ಕುಸಿತಗೊಂಡಿರುವುದರಿAದಾಗಿ ನೀರಿನ ಮಟ್ಟ ತೀರಾ ಕಡಿಮೆ ಆಗಿರುವುದರಿಂದಾಗಿ ಬೇಸಾಯ ಮಾಡಿದ ಬೆಳೆಗೆ ನೀರು ಇಲ್ಲ್ಲದಾಗಿದೆ.
ಕಾವೇರಿ ನದಿ ಅಂಚಿನ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅಳವಡಿಕೆ ಮಾಡಲಾಗಿರುವ ಏತ ನೀರಾವರಿ ಯೋಜನೆಗೂ ಸಹ ಈ ಸಾಲಿನಲ್ಲಿ ನೀರಿನ ಬರ ತಟ್ಟಿದೆ. ಏತ ನೀರಾವರಿ ಯೋಜನೆಯ ಅಡಿಯಲ್ಲಿ ಅಳವಡಿಕೆ ಮಾಡಲಾಗಿ ರುವ ಪೈಪ್ಗಳಿಗೆ ನದಿಯಲ್ಲಿ ಹರಿಯುವ ನೀರಿನ ಮಟ್ಟ ತೀರಾ ಕಡಿಮೆ ಆಗಿರುವುದರಿಂದಾಗಿ ಏತ ನೀರಾವರಿ ಯೋಜನೆಯ ಬೇಸಾಯಕ್ಕೂ ಸಹ ನೀರು ಇಲ್ಲದಾಗಿದೆ. ಇದರಿಂದಾಗಿ ರೈತರ ಬೆಳೆಗಳು ಸಹ ಒಣಗುವಂತ ಪ್ರಸಂಗ ಎದುರಾಗಿದೆ.
- ಕೆ.ಕೆ. ನಾಗರಾಜಶೆಟ್ಟಿ.