ಮಡಿಕೇರಿ, ಏ. ೧೮: ‘ಸಂವಿಧಾನ ರಕ್ಷಿಸಿ, ಬಹುತ್ವ ಭಾರತ ಉಳಿಸಿ, ನಾವೆಲ್ಲ ಸೇರಿ ಸೌಹಾರ್ದ ಕರ್ನಾಟಕ ಕಟ್ಟೋಣ’ ಎಂಬ ಘೋಷವಾಕ್ಯದಲ್ಲಿ ಸಮಾನ ಮನಸ್ಕರ ಒಕ್ಕೂಟ - ಕರ್ನಾಟಕ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭಗೊAಡಿದ್ದು. ರಾಜ್ಯದ ಜನರ ಬದುಕು-ಬವಣೆ ನಿರ್ಧರಿಸುವ ಮಹತ್ವದ ಪ್ರಜಾಪ್ರಭುತ್ವ ಹೋರಾಟ ಇದಾಗಿದೆ. ಈ ಹಿನ್ನೆಲೆಯಲ್ಲಿ ಜನರ ಮುಂದಿರುವ ಸವಾಲು, ಪ್ರಶ್ನೆ, ಬೇಡಿಕೆಗಳು ಹಾಗೂ ಮತಮೌಲ್ಯದ ಜಾಗೃತಿಗಾಗಿ ಸಂಘಟನೆ ಸ್ಥಾಪಿಸಲಾಗಿದೆ. ‘ಸಂವಿಧಾನ ರಕ್ಷಿಸಿ ಬಹುತ್ವ ಭಾರತ ಉಳಿಸಿ’ ಘೋಷವಾಕ್ಯದೊಂದಿಗೆ ಅಭಿಯಾನಕ್ಕೆ ಮುಂದಾಗಿದ್ದೇವೆ. ಪ್ರಗತಿಪರ ಚಿಂತಕರು, ಸಾಹಿತಿಗಳು, ವಿಚಾರವಾದಿಗಳು ಸಂಘಟನೆಯಲ್ಲಿದ್ದು, ಜನರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆ ನಡೆಸಲಿದ್ದೇವೆ ಎಂದು ವಿವರಿಸಿದರು.
ಸಂಘಟನೆಯ ಜಿಲ್ಲಾ ಪ್ರತಿನಿಧಿ ಚೇರಂಡ ನಂದ ಸುಬ್ಬಯ್ಯ ಮಾತನಾಡಿ, ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯರಂತಹ ನಾಯಕರನ್ನು ಜಿಲ್ಲೆ ಕೊಡುಗೆಯಾಗಿ ನೀಡಿದೆ. ಈ ಬಾರಿ ಮತದಾರರು ಜವಾಬ್ದಾರಿಯಿಂದ, ಪ್ರಜ್ಞಾವಂತಿಕೆಯಿAದ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಕರೆ ನೀಡಿದರು.
ಗೋಷ್ಠಿಯಲ್ಲಿ ಸಂಘಟನೆಯ ಸಂಚಾಲಕರುಗಳಾದ ಪ್ರೊ. ಎಲ್.ಎನ್. ಮುಕುಂದರಾಜ್, ಜಾಣಗೆರೆ ವೆಂಕಟರಾಮಯ್ಯ, ಡಾ. ಲೀಲಾ ಸಂಪಿಗೆ, ಬಿ.ವಿ. ನರಸಿಂಹಯ್ಯ ಹಾಜರಿದ್ದರು.