ಮಡಿಕೇರಿ, ಏ. ೧೯: ಕೊಡಗು ಜಿಲ್ಲೆಯಲ್ಲಿ ಪ್ರಥಮವೆನಿಸಿರುವ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯ ಶಿಲೆಯಿಂದ ನಿರ್ಮಾಣಗೊಂಡು ಪುನರುತ್ಥಾನಗೊಂಡಿದ್ದು, ಇದರ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಮೇ ೨ ರಿಂದ ೪ ರವರೆಗೆ ವಿವಿಧ ಮಡಿಕೇರಿ, ಏ. ೧೯: ಕೊಡಗು ಜಿಲ್ಲೆಯಲ್ಲಿ ಪ್ರಥಮವೆನಿಸಿರುವ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯ ಶಿಲೆಯಿಂದ ನಿರ್ಮಾಣಗೊಂಡು ಪುನರುತ್ಥಾನಗೊಂಡಿದ್ದು, ಇದರ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಮೇ ೨ ರಿಂದ ೪ ರವರೆಗೆ ವಿವಿಧ ಕೊಡಗಿನಲ್ಲಿ ಹಲವು ರಾಮ ಮಂದಿರಗಳಿದ್ದರೂ ವಿಧ್ಯುಕ್ತವಾಗಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಸೀತಾ ಲಕ್ಷö್ಮಣ ಹನುಮನ ಸಹಿತ ಶ್ರೀ ಕೋದಂಡರಾಮ ದೇವಾಲಯ ಎಲ್ಲಿಯೂ ಇಲ್ಲ. ಈ ದೇವಾಲಯವೇ ಜಿಲ್ಲೆಯಲ್ಲಿ ಪ್ರಥಮವೆನಿಸಿದೆ. ಇದರೊಂದಿಗೆ ಶಬರಿಮಲೈನಲ್ಲಿ ಕನ್ನಿಮೂಲ ದಿಕ್ಕಿನಲ್ಲಿ ನೆಲೆ ನಿಂತಿರುವ ಮಹಾಗಣಪತಿಯಂತೆ ಮಡಿಕೇರಿ ಯಲ್ಲಿ ಕನ್ನಿಮೂಲ ದಿಕ್ಕಿನಲ್ಲಿ ಶ್ರೀ ಬಲಮುರಿ (ಬಲಗಡೆ ಸೊಂಡಿಲು) ಕ್ಷಿಪ್ರಪ್ರಸಾದ ಮಹಾಗಣಪತಿಯ ದೇಗುಲವೂ ನಿರ್ಮಾಣಗೊಂಡಿದ್ದು ಪ್ರತಿಷ್ಠಾಪನೆಗೊಳ್ಳಲಿದೆ. ಅಲ್ಲದೆ, ನವಗ್ರಹಗಳ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗುತ್ತದೆ.
(ಮೊದಲ ಪುಟದಿಂದ) ಮೇ ೨ ರ ಸಂಜೆಯಿAದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊAಡು ಹೋಮ-ಹವನಾದಿಗಳು ಮೇ.೩ ರಂದು ಮುಂದುವರಿಯಲಿದೆ. ಮೇ ೩ ರಂದು ಬೆ.೯ ಗಂಟೆಗೆ ಪ್ರಧಾನ ಕಲಶ ಸಹಿತ ಉತ್ಸವ ಮೂರ್ತಿ ಹೊತ್ತ ಮಂಟಪದೊAದಿಗೆ ಧಾರ್ಮಿಕ ಮೆರವಣಿಗೆಯು ಗಾಂಧಿ ಮೈದಾನದಿಂದ ಹೊರಡಲಿದೆ. ವಿವಿಧ ಕಲಾ ತಂಡಗಳು, ಚಂಡೆ ವಾದ್ಯ, ಭಜನಾ ತಂಡಗಳ, ಕಲಶ ಹೊತ್ತ ಮಹಿಳೆಯರ ಸಹಿತ ಮೆರವಣಿಗೆಯು ದೇವಾಲಯ ಆವರಣ ತಲುಪಲಿದೆ. ಆ ದಿನ ಮಧ್ಯಾಹ್ನ ೧ ಗಂಟೆ ಬಳಿಕ ಅನ್ನ ಸಂತರ್ಪಣೆಯಿರುತ್ತದೆ. ಅಲ್ಲದೆ, ಸಂಜೆ ೫ ಗಂಟೆಯಿAದ ದೇವಾಲಯ ಆವರಣದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸಭಾ ಕಾರ್ಯಕ್ರಮವೂ ಇರುತ್ತದೆ. ಮೇ ೪ ರಂದು ದೇವಾಲಯ ಆವರಣದಲ್ಲಿ ವಿವಿಧ ಹೋಮ ಹವನಾದಿ ವಿಧಿ ವಿಧಾನಗಳು ಬೆಳಿಗ್ಗೆ ೬ ಗಂಟೆಗೆ ಪ್ರಾರಂಭಗೊಳ್ಳುತ್ತವೆ. ಬೆಳಿಗ್ಗೆ ೭.೪೫ ರ ವೃಷಭ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ ಜರುಗಲಿದೆ. ಬೆಳಿಗ್ಗೆ ೧೦.೦೫ ಕ್ಕೆ ಮಿಥುನ ಲಗ್ನದಲ್ಲಿ ಬ್ರಹ್ಮ ಕುಂಭಾಭಿಷೇಕ ಜರುಗಲಿದೆ. ಮಹಾಪೂಜೆ ಬಳಿಕ ಮಧ್ಯಾಹ್ನ ೧ ರಿಂದ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ೫ ರಿಂದ ದೇವಾಲಯ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ದೇವಾಲಯ ಆವರಣದಲ್ಲಿ ವೇದೋಕ್ತ ಮಂತ್ರಪಠಣ, ರಾಮಾಯಣ ಪಾರಾಯಣ ಹಾಗೂ ೫ ಭಜನಾ ಮಂಡಳಿಗಳಿAದ ತಾ. ೪ ಮತ್ತು ೫ ರಂದು ಭಜನಾ ಕಾರ್ಯಕ್ರಮ ಏರ್ಪಟ್ಟಿದೆ ಎಂದು ಅವರುಗಳು ತಿಳಿಸಿದರು.
ಕಳೆದ ೪೦ ವರ್ಷಗಳ ಹಿಂದೆ ಕಿರು ದೇವಾಲಯವೊಂದನ್ನು ನಿರ್ಮಿಸಿ ಕೆಳಭಾಗದಲ್ಲಿ ಕೋದಂಡ ರಾಮನನ್ನು ಪ್ರತಿಷ್ಠಾಪನೆ ಗೊಳಿಸಲಾಗಿತ್ತು. ಇದೀಗ ಜೀರ್ಣೋದ್ಧಾರದ ಮೂಲಕ ಮೇಲ್ಭಾಗಕ್ಕೆ ತರಲಾಗಿದೆ. ದೇವಾಲಯದಲ್ಲಿ ದಶಾವತಾರ, ಬ್ರಹ್ಮ - ಸರಸ್ವತಿ, ಶಿವ ಪರಿವಾರ, ಧನ್ವಂತರಿ, ದತ್ತಾತ್ರೇಯ, ಜಯವಿಜಯ, ಅಶ್ವಿನೀ ದೇವತೆಗಳು, ಶ್ರೀರಾಮ ಪಟ್ಟಾಭಿಷೇಕ ಹಾಗೂ ವಾಲ್ಮೀಕಿಯಿಂದ ಲವ-ಕುಶರಿಗೆ ರಾಮಾಯಣ ಪಠಣ ಇತ್ಯಾದಿ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಈಗ ಕೆಳಭಾಗದಲ್ಲಿ ಸಮುದಾಯ ಭವನವಿದ್ದು ಅಲ್ಲಿ ಸ್ಥಳೀಯ ಸಮುದಾಯದವರ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರುತ್ತದೆ. ಸಮುದಾಯ ಭವನದ ಕೆಲಸ ಇನ್ನೂ ಪೂರ್ಣ ಗೊಳ್ಳಬೇಕಾಗಿದೆ.
ಈ ದೇವಾಲಯವು ಸಾರ್ವಜನಿಕ ದೇವಸ್ಥಾನವಾಗಿದ್ದು ಭಕ್ತಾದಿಗಳ ಸಹಕಾರದಿಂದ ಟ್ರಸ್ಟ್ ಮೂಲಕ ನಿರ್ವಹಿಸಲ್ಪಡುತ್ತಿದೆ. ಕಳೆದ ೫೦ ವರ್ಷಗಳಿಂದ ದೇವಾಲಯದ ಸಾನಿಧ್ಯ ಅಸ್ತಿತ್ವದಲ್ಲಿದೆ. ಆಗ ಭಜನಾ ಮಂದಿರವಿತ್ತು. ಶ್ರೀ ರಾಮನ ಚಿತ್ರ ಪಟಕ್ಕೆ ಪೂಜೆ ಮಾಡಲಾಗುತ್ತಿತ್ತು. ಕಾಲ ಕ್ರಮೇಣ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಿಸಲಾಗಿತ್ತು. ಮಡಿಕೇರಿಯ ನಾಡಹಬ್ಬ ದಸರಾ ದಲ್ಲಿಯೂ ಈ ದೇವಾಲಯದಿಂದ ಮಂಟಪವೊAದು ಸಿದ್ಧಗೊಂಡು ಶೋಭಾಯಾತ್ರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪಾಲ್ಗೊಳ್ಳುತ್ತಿದೆ.
ನಾಡಿನ ದಾನಿಗಳ ಹಾಗೂ ಮಲ್ಲಿಕಾರ್ಜುನ ನಗರ ನಿವಾಸಿಗಳ ಸಹಕಾರದಿಂದ ದೇವಾಲಯ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಸುಮಾರು ೨ ಕೋಟಿ ವೆಚ್ಚದಲ್ಲಿ ದೇವಾಲಯ ತಲೆ ಎತ್ತಿ ನಿಂತಿದೆ. ಮುಂದಿನ ದಿನಗಳಲ್ಲಿ ದೇವಾಲಯದ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರುಗಳು ವಿವರಿಸಿದರು.
ಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ನಂಜುAಡ, ಖಜಾಂಚಿ ಎಸ್. ಕುಶಾಲ್, ದೇವಾಲಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಸುಧಾಕರ್, ಖಜಾಂಚಿ ಹೆಚ್.ಎನ್. ತಿಮ್ಮಯ್ಯ, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಕೆ. ಮಧುಕರ್, ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಸುಬ್ಬರಾವ್, ಸ್ವಾಗತ ಸಮಿತಿ ಅಧ್ಯಕ್ಷ ವಿನೋದ್ಕುಮಾರ್ ಉಪಸ್ಥಿತರಿದ್ದರು.