ಸೋಮವಾರಪೇಟೆ, ಏ. ೧೮: ಕಕ್ಕೆಹೊಳೆ ಸಮೀಪದ ಬಿ.ಎಂ. ದಿನೇಶ್ ಎಂಬವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಸುಮಾರು ಅರ್ಧ ಎಕರೆ ಕಾಫಿ ತೋಟ ಹಾಗೂ ಬಿದಿರಿನ ಮೆಳೆ ಸುಟ್ಟುಹೋದ ಘಟನೆ ನಡೆದಿದೆ.

ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭ ಅಗ್ನಿಶಾಮಕ ಠಾಣಾಧಿಕಾರಿ ಪಿ.ಎಸ್. ಸುರೇಶ್, ಅಗ್ನಿಶಾಮಕ ಪ್ರಮುಖ ಪಿ.ಎಸ್. ನಾಗೇಶ್, ಸಿಬ್ಬಂದಿಗಳಾದ ವಿನಯ್, ಲಕ್ಷಿö್ಮÃಕುಮಾರ, ಪ್ರವೀಣ್ ಇದ್ದರು.