ಸೋಮವಾರಪೇಟೆ, ಏ. ೧೮ : ಕೊಡಗಿನ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ.ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ೨೦ ತಿಂಗಳ ಅವಧಿÀಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು, ರೈತರ ಸಾಲಮನ್ನಾ ಮಾಡಿದ್ದಾರೆ. ೨೦೧೮ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ ಮನೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ೧೦೦೦ ಮನೆಗಳನ್ನು ನಿರ್ಮಿಸಿಕೊಟ್ಟು, ಕೊಡಗಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತಿçà ಶಕ್ತಿ, ಸ್ವ ಸಹಾಯ ಸಂಘದ ಸದಸ್ಯರ ಸಾಲಮನ್ನಾ, ಆಟೋ ಚಾಲಕರಿಗೆ ೨ಸಾವಿರ ರೂ.ಗಳ ಮಾಸಾಶನ, ವೃದ್ಧಾಪ್ಯ ಹಾಗೂ ಅಂಗವಿಕಲರಿಗೆ ೫ ಸಾವಿರ ರೂ.ಗಳ ಮಾಸಾಶನ, ಬಡ ಕುಟುಂಬಕ್ಕೆ ವಾರ್ಷಿಕ ಉಚಿತ ೫ ಗ್ಯಾಸ್ ಸಿಲಿಂಡರ್ಗಳನ್ನು ವಿತರಿಸುವ ಭರವಸೆಯನ್ನು ಜೆಡಿಎಸ್ ನೀಡಿದೆ. ನುಡಿದಂತೆ ನಡೆಯುವ ಏಕೈಕ ಪಕ್ಷ ಜೆಡಿಎಸ್. ವೀರಾಜಪೇಟೆ ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ ಕೀರ್ತಿ ಜೆಡಿಎಸ್ಗೆ ಸಲ್ಲುತ್ತದೆ ಎಂದು ಗಣೇಶ್ ಹೇಳಿದರು.
ಪ್ರಾದೇಶಿಕ ಪಕ್ಷದ ಆಡಳಿತದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ರಾಷ್ಟಿçÃಯ ಪಕ್ಷಗಳಿಗೆ ಮತ ಹಾಕಿದರೆ ಅಭಿವೃದ್ಧಿ ಅಸಾಧ್ಯ ಎಂದು ಪಕ್ಷದ ಅಭ್ಯರ್ಥಿ ನಾಪಂಡ ಮುತ್ತಪ್ಪ ಹೇಳಿದರು.
ಕಳೆದ ೨೫ ವರ್ಷಗಳಿಂದ ಮಾಡದ ಕಾಮಗಾರಿಗಳನ್ನು ಹಾಲಿ ಶಾಸಕರು ಈಗ ಮಾಡುತ್ತೇನೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆ, ಸೇತುವೆ ಇನ್ನಿತರ ಕಾಮಗಾರಿಗೆ ೫ ಸಾವಿರ ಕೋಟಿ ರೂ. ಅನುದಾನ ಬೇಕಾಗಿದೆ. ೧೬ ಸಾವಿರ ಕುಟುಂಬಗಳಿಗೆ ವಾಸಕ್ಕೆ ಮನೆಗಳಿಲ್ಲ. ಬಿಜೆಪಿ ಈ ಬಾರಿ ಗೆಲುವು ಸಾಧಿಸುವುದಿಲ್ಲ. ಸ್ಥಳೀಯರಲ್ಲದ ವ್ಯಕ್ತಿ ಕೊಡಗಿನಲ್ಲಿ ಕಾಂಗ್ರೆಸ್ನಿAದ ಕಣದಲ್ಲಿದ್ದಾರೆ. ಇವರುಗಳನ್ನು ಮತದಾರರು ತಿರಸ್ಕರಿಸಲಿದ್ದಾರೆ ಎಂದು ಮುತ್ತಪ್ಪ ಹೇಳಿದರು.
ಗೋಷ್ಠಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಸಿ.ಎಸ್. ನಾಗರಾಜು, ರಾಜ್ಯ ಉಪಾಧ್ಯಕ್ಷ ಶರೀಫ್, ಜಿಲ್ಲಾ ಪ್ರ. ಕಾರ್ಯದರ್ಶಿ ಆದಿಲ್ಪಾಷ ಇದ್ದರು.