ಸೋಮವಾರಪೇಟೆ,ಏ.೧೮: ಸಮೀಪದ ಗಣಗೂರು ಗ್ರಾಮದಲ್ಲಿರುವ ಶ್ರೀ ಅಜ್ಜಪ್ಪ ಮತ್ತು ಪಾಷಾಣಮೂರ್ತಿ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಪೂಜಾ ಉತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ತುಳುನಾಡು ಸಂಪ್ರದಾಯದAತೆ ನಡೆದ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಭಾಗಿಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಗ್ರಾಮದ ಕಮಲ ಬಸಪ್ಪ ಮನೆಯವರು ಈ ದೈವ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದು, ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದ ಜಿಲ್ಲೆ ಹಾಗೂ ಹೊರಜಿಲ್ಲೆಯ ಭಕ್ತರು, ಅಜ್ಜಪ್ಪ ಪಾಷಾಣಮೂರ್ತಿಯಲ್ಲಿ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವಂತೆ ಪ್ರಾರ್ಥಿಸಿದರು. ಗ್ರಾಮಗಳ ಸುಭೀಕ್ಷೆಗಾಗಿ, ಮಳೆ, ಬೆಳೆ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಎರಡು ದಿನಗಳ ಕಾಲ ನಡೆದ ಪೂಜಾ ಉತ್ಸವದಲ್ಲಿ ಗಂಗೆ ಪೂಜೆ, ಕಳಸ ಪೂಜೆ, ಅಡ್ಡೆ ಹೊತ್ತು ಗ್ರಾಮದಲ್ಲಿ ಪ್ರದಕ್ಷಿಣೆ, ಸುಗ್ಗಿ ಕುಣಿತ ಸೇರಿದಂತೆ ಇತರ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.