ಮಡಿಕೇರಿ, ಏ. ೧೯: ಸೂಡಾನ್ ದೇಶದಲ್ಲಿ ಸೇನೆ ಹಾಗೂ ಅರೆ ಸೇನಾಪಡೆಗಳ ನಡುವೆ ಸಂಘರ್ಷ ಸಂಭವಿಸಿದ್ದು ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಕರ್ನಾಟಕದ ಹಲವರು ಸಿಲುಕಿ ಕೊಂಡಿರುವ ಮಾಹಿತಿಯಿದೆ. ಕೊಡಗು ಜಿಲ್ಲೆಯ ಯಾರಾದರೂ ಸೂಡಾನ್ ದೇಶದಲ್ಲಿ ಸಿಲುಕಿದ್ದರೆ, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ದೂ:೦೮೨೭೨-೨೨೧೦೭೭, ೦೮೨೭೨-೨೨೧೦೯೯, ವಾಟ್ಸಾಪ್ ಸಂಖ್ಯೆ:- ೮೫೫೦೦೦೧೦೭೭