*ಗೋಣಿಕೊಪ್ಪಲು, ಏ. ೧೮: ನಾಡಿನಾದ್ಯಂತ ಉತ್ತಮ ಮಳೆಯಾಗಲಿ ಎಂದು ತಾ. ೨೪ ರಂದು ಇತಿಹಾಸ ಪ್ರಸಿದ್ಧ ಮಾವುಕಲೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲು ದಕ್ಷಿಣ ಕೊಡಗಿನ ತಿತಿಮತಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಅಂದು ಬೆಳಿಗ್ಗೆ ೭ ಗಂಟೆಗೆ ತಿತಿಮತಿ ಮುಖ್ಯ ರಸ್ತೆಯಲ್ಲಿರುವ ರಾಮ ಮಂದಿರದಿAದ ಹೊರಟು ಮಾವುಕಲೇಶ್ವರ ಬೆಟ್ಟಕ್ಕೆ ತೆರಳಿ ಅಲ್ಲಿನ ಮಾವುಕಲೇಶ್ವರನ ಗುಡಿಯಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಗು ವುದು. ಮಳೆಗಾಗಿ ದೇವರ ಮೊರೆ ಹೋಗುವುದು ಇಲ್ಲಿನ ವಾಡಿಕೆಯಾ ಗಿದ್ದು, ಈ ಕಾರ್ಯದಲ್ಲಿ ತಿತಿಮತಿ, ನೊಕ್ಯ, ಹೆಬ್ಬಾಲೆ ಹಾಗೂ ಭದ್ರಗೋಳ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ತಿತಿಮತಿ ಗ್ರಾಮಸ್ಥರು ತಿಳಿಸಿದ್ದಾರೆ.