ಮಡಿಕೇರಿ, ಏ. ೧೯: ಕಳೆದ ೧೩ ವರ್ಷಗಳಿಂದ ನಗರಸಭೆಯಿಂದ ಅಧಿಕೃತವಾಗಿ ಬೀದಿ ಬದಿ ವ್ಯಾಪಾರಿ ಗುರುತಿನ ಚೀಟಿ ಪಡೆದುಕೊಂಡು ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಬಸ್ ತಂಗುದಾಣದ ಬಳಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಇದೀಗ ಕಳೆದೆರೆಡು ದಿನಗಳ ಹಿಂದಷ್ಟೇ ಆ ಜಾಗದಲ್ಲಿ ದಿಢೀರನೆ ತಲೆ ಎತ್ತಿರುವ ಧ್ವಜ ಸ್ತಂಭದಿAದಾಗಿ ವ್ಯಾಪಾರವಿಲ್ಲದೆ ಹೈರಾಣಾಗಿದ್ದಾರೆ. ಇದೀಗ ಧ್ವಜ ಸ್ತಂಭ ಎದ್ದು ನಿಂತಿರುವ ಜಾಗದಲ್ಲಿ ತಳ್ಳುಗಾಡಿಯನ್ನಿರಿಸಿ ಸುಮಾರು ೧೩ ವರ್ಷಗಳಿಂದ ಹೆಚ್.ಎನ್ ಕುಮಾರಿ ಎಂಬವರು ವ್ಯಾಪಾರ ಮಾಡುತ್ತಿದ್ದರು.
ಕೆಲಮಂದಿ ಮಹಿಳೆಯ ಬದುಕಿಗೆ ಆಸರೆಯಾದ ಜಾಗದಲ್ಲಿ ದಿಢೀರನೆ ಧ್ಜಜಸ್ತಂಭವೊAದನ್ನು ಸ್ಥಾಪಿಸಿದರು. ಧ್ವಜಸ್ತಂಭದ ಬಳಿ ಇದೀಗ ವ್ಯಾಪಾರ ಮಾಡಲು ಟ್ರಾಫಿಕ್ ಸಮಸ್ಯೆ, ವಾಹನ ನಿಲುಗಡೆಗೆ ತೊಂದರೆಯಾಗುವುದರಿAದ ಅಸಾಧ್ಯವಾಗಿದೆ. ರಾಷ್ಟಿçÃಯ ಹಬ್ಬಾಚರಣೆಗೆ ಧ್ವಜಸ್ತಂಭ ಬಳಕೆಯಾಗುವುದರಿಂದ ಅನುಮತಿ ಇಲ್ಲದಿದ್ದರೂ, ನಗರಸಭೆ ಅಧಿಕಾರಿಗಳು ಅದನ್ನು ತೆರವು ಗೊಳಿಸಲು ಮನಸ್ಸು ತೋರುತ್ತಿಲ್ಲ.