ಮಡಿಕೇರಿ, ಏ. ೧೯: ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊಲೀಸ್ ವೀಕ್ಷಕರಾಗಿ ದೆಬಾಸಿಸ್ ಸರ್ಕಾರ್ (ಐಪಿಎಸ್) ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಅವರು ಇಂದು ಜಿಲ್ಲೆಗೆ ಆಗಮಿಸಿದ್ದು,

ಪೊಲೀಸ್ ವೀಕ್ಷಕರ ನೇಮಕ

(ಮೊದಲ ಪುಟದಿಂದ) ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು.

ವೀಕ್ಷಕರು ಸುದರ್ಶನ ಅತಿಥಿ ಗೃಹದಲ್ಲಿ ಬೆಳಿಗ್ಗೆ ೧೦ ರಿಂದ ೧೧ರವರೆಗೆ ಸಂದರ್ಶನಕ್ಕೆ ಲಭ್ಯವಿರಲಿದ್ದಾರೆ. ಅಲ್ಲದೆ ಮೊ. ೮೦೮೮೪೯೨೮೮ರಲ್ಲಿ ಹಾಗೂ ಅವರ ಕ್ಷೇತ್ರಾಧಿಕಾರಿ ಜಿ.ಕೆ. ರಾಘವೇಂದ್ರ ಅವರನ್ನು ಮೊ. ೯೪೮೦೮೦೪೯೦೮ ಮೂಲಕ ಸಂಪರ್ಕ ಮಾಡಬಹುದಾಗಿದೆ.