ಕಣಿವೆ, ಏ. ೧೯: ಈ ಬಾರಿ ಯುಗಾದಿಯ ನಂತರ ಮಳೆ ಬಾರದ ಹಿನ್ನೆಲೆಯಲ್ಲಿ ತಾಪಮಾನ ಏರುತ್ತಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಇಂಗುತ್ತಿದೆ. ಹಾಗಾಗಿ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ ಕಾವೇರಿ ನದಿಯಲ್ಲಿ ನೀರಿಲ್ಲದೇ ಬರೀ ಕಪ್ಪು ಕಲ್ಲುಗಳು ಗೋಚರಿಸುತ್ತಿದ್ದು ಅದರ ಮೇಲೆ ಪ್ರವಾಸಿಗರ ಸಂಚಾರ ಸಾಗುತ್ತಿದೆ.