ಸಿದ್ದಾಪುರ, ಏ, ೧೯: ಕಸವಿಲೇವಾರಿಗೆ ಜಾಗದ ಸಮಸ್ಯೆ ನದಿ ದಡದಲ್ಲಿ ರಾಶಿ ರಾಶಿ ತ್ಯಾಜ್ಯ ತಂದು ಸುರಿಯುತ್ತಿದ್ದರು ಗ್ರಾಮ ಪಂಚಾಯಿತಿ ನಿರ್ಲಕ್ಷö್ಯತನ ತೋರುತ್ತಿದೆ.

ವೀರಾಜಪೇಟೆ ತಾಲೂಕು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು, ಪ್ರವಾಸಿಗಳು ರಸ್ತೆ ಬದಿಯಲ್ಲಿ ಹಾಗೂ ನದಿ ದಡದಲ್ಲಿ ನಿರಂತರ ಕಸ ತಂದು ಸುರಿಯುವುದರೊಂದಿಗೆ ಇಡೀ ವಾತವರಣವೇ ದುರ್ನಾತ ಬೀರುವ ಮೂಲಕ ಜಲಮೂಲಗಳು ಕಲುಷಿತಗೊಳ್ಳುತ್ತಿದೆ. ಮದ್ಯ ಸೇವಿಸಿ ಬಾಟಲಿಗಳನ್ನು ನದಿಗೆ ಎಸೆಯುತ್ತಿರುವ ಘಟನೆ ನಡೆಯುತ್ತಿದೆ.

ಕಸವಿಲೇವಾರಿ ಸಮಸ್ಯೆ ಬಗೆಹರಿಸುವುದರಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದ್ದು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆಗೂ ಬೆಲೆ ಕೊಡುತ್ತಿಲ್ಲ.ಇದರಿಂದ ಬೀಯರ್ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಜೀವನದಿ ಕಾವೇರಿ ಒಡಲು ತವರಿನಲ್ಲೆ ಮಲೀನಗೊಳ್ಳುತ್ತಿದ್ದು ಲಕ್ಷಾಂತರ ಜೀವ ರಾಶಿಗಳು , ಜಲಚರಗಳ ಜೀವಕ್ಕೆ ಸಂಚಾರ ಸಂಭವಿಸಲಿದೆ.

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾದ್ದರಿಂದ ಮದ್ಯದಂಗಡಿ, ವೈನ್ಸ್ಗಳಲ್ಲಿ ಕುಳಿತು ಮದ್ಯ ಸೇವನೆಯನ್ನು ನಿಷೇಧಿಸಿದ್ದರಿಂದ ಮದ್ಯಪ್ರಿಯರು ಪಾರ್ಸಲ್ ತಂದು ನದಿದಡದಲ್ಲಿ ಸೇವಿಸಿ ಆಹಾರ ಪೊಟ್ಟಣಗಳನ್ನು ಹಾಗೂ ಮದ್ಯ ಬಾಟಲಿಗಳನ್ನು ನದಿಗೆ ಎಸೆದು ವಾತಾವರಣ ಕಲುಷಿತಗೊಳಿಸುತ್ತಿದ್ದಾರೆ. ಬೀಟ್ ಪೊಲೀಸರು ಇವರ ಮೇಲೆ ನಿಗಾವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ಪರಿಸರ ಸಂರಕ್ಷಣೆಗೆ ಸಂಬAಧಪಟ್ಟAತೆ ಆತಿಥ್ಯ ಕೇಂದ್ರಗಳಿಗೆ ನೋಟೀಸ್ ಜಾರಿ ಮಾಡಬೇಕು ಕೂಡಲೆ ರಸ್ತೆ, ನದಿದಡ ಶುಚಿತ್ವಕ್ಕೆ ಕ್ರಮವಹಿಸಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ಮಾಡಬೇಕಾಗುತ್ತದೆ. ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.