ಸುAಟಿಕೊಪ್ಪ, ಏ. ೧೮: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

೫೫ನೇ ವರ್ಷದ ತೆರೆ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪ ಹೂ, ತಳಿರು ತೋರಣಗಳಿಂದ ಸಿಂಗಾರಿಸಲಾಗಿತ್ತು. ಚಂಡೆಮೇಳದೊAದಿಗೆ ಆರಂಭಗೊAಡ ತೆರೆ ಮಹೋತ್ಸವ ಭಾನುವಾರ ರಾತ್ರಿ ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಹೊಸಕೋಟೆ, ಗರಗಂದೂರು, ಮಾದಾಪುರ, ಚೆಟ್ಟಳ್ಳಿ, ಭೂತನಕಾಡು, ಕೆದಕಲ್ ಹಾಗೂ ಬಾಳೆಕಾಡು ಭಾಗಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ತೆರೆ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನದ ಆರ್ಚಕರಾದ ಮಂಜುನಾಥ ಉಡುಪ ಹಾಗೂ ಮುತ್ತಪ್ಪ ದೇವಸ್ಥಾನ ಪೂಜಾರಿ ಶಿವರಾಂ ಅವರುಗಳು ಶನಿವಾರದಂದು ಗಣಪತಿ ಹವನ ಶುದ್ಧಿ ಪುಣ್ಯಾಹ, ವಿಶೇಷ ಪೂಜಾ ಕೈಂಕರ್ಯಗಳನ್ನು ಕಾರ್ಯವನ್ನು ನಡೆಸುವುದರೊಂದಿಗೆ ಬಾವುಟವನ್ನು ಏರಿಸುವ ಮೂಲಕ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಶನಿವಾರ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಶ್ರೀ ಮುತ್ತಪ್ಪ ವೆಳ್ಳಾಟಂ, ಭಾನುವಾರ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಶ್ರೀ ಶಾಸ್ತಪ್ಪನ ವೆಳ್ಳಾಟಂ, ಶ್ರೀ ಗುಳಿಗನ ವೆಳ್ಳಾಟಂ ನಡೆಯಿತು. ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಮಹಿಳೆಯರು ಮತ್ತು ಮಕ್ಕಳು ದೀಪವನ್ನು ಹಿಡಿದು ಅಡಿಯರ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಾಳೆಕಾಡುವಿನ ಶ್ರೀ ಮುತ್ತಪ್ಪ ಸೇವಾ ಸಮಿತಿ ವತಿಯಿಂದ ಭವ್ಯ ಮಂಟಪದಲ್ಲಿ ಶ್ರೀ ಮುತ್ತಪ್ಪ ದೇವರ ಪ್ರತಿಷ್ಠಾಪಿಸಿ ಮಹಿಳೆಯರು ಮತ್ತು ತಲಾವನ್ನು ಹಿಡಿದು ಚಂಡೆ ಹಾಗೂ ವಾದ್ಯಗೋಷ್ಠಿ ಕಲಶ, ದೇವರ ಕಲಾಕೃತಿಯ ಬಿಂಬವನ್ನು ಹೊತ್ತು ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಬಳಿಕ ಶ್ರೀ ಮುತ್ತಪ್ಪ ವೆಳ್ಳಾಟಂ, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ಶ್ರೀ ವಸೂರಿಮಾಲೆ ಮೆರವಣಿಗೆ, ಕಳಿಗಪಾಟ್, ಶ್ರೀ ಗುಳಿಗನ ಕೋಲ, ಶ್ರೀ ಶಾಸ್ತಪ್ಪನ ಕೋಲ, ಬೆಳಗಿನ ಜಾವ ಶ್ರೀ ತಿರುವಪ್ಪನ ಕೋಲ ನಡೆಯಿತು.

ಸೋಮವಾರ ಶ್ರೀ ರಕ್ತ ಚಾಮುಂಡಿಕೋಲ, ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, ಶ್ರೀ ವಿಷ್ಣುಮೂರ್ತಿಕೋಲ, ಶ್ರೀ ಚಾಮುಂಡೇಶ್ವರಿ ಕೋಲ, ಶ್ರೀ ವಸೂರಿ ಮಾಲೆ ಕೋಲ, ಗುರುಶ್ರೀ ದರ್ಪಣ ನಡೆದು ಬಾವುಟ ಇಳಿಸುವುದರೊಂದಿಗೆ ತೆರೆ ಮಹೋತ್ಸವವು ಸಂಪನ್ನಗೊAಡಿತು.

ಈ ಸಂದರ್ಭ ದೇವಸ್ಥಾನ ಸಮಿತಿ ಕಾರ್ಯದರ್ಶಿ ಶಶಿಕಾಂತಾ ರೈ, ಖಜಾಂಚಿ ಎಸ್.ಜಿ. ಶ್ರೀನಿವಾಸ್, ಕೆ.ಪಿ. ಜಗನ್ನಾಥ್, ಎ. ಶ್ರೀಧರ್ ಕುಮಾರ್, ಸುರೇಶ್ ಗೋಪಿ, ಎ. ಶ್ರೀಧರನ್, ಧನು ಕಾವೇರಪ್ಪ, ಪೃಥ್ವಿರಾಜ್, ಸುರೇಶ್ ಚಂದು, ದಿನು ದೇವಯ್ಯ, ರಮೇಶ್ ಪಿಳ್ಳೆ, ವಿ.ಎ. ಸಂತೋಷ್ ಕುಮಾರ್, ವಿನೋದ್ ಇದ್ದರು.