ನಾಪೋಕ್ಲು, ಏ. ೧೭: ಸಮೀಪದ ಮೂಟೇರಿ ಉಮಾಮಹೇಶ್ವರಿ ವಾರ್ಷಿಕ ಉತ್ಸವ ಭಾನುವಾರ ವಿಜೃಂಭಣೆಯಿAದ ನಡೆಯಿತು. ಎರಡು ದಿನಗಳ ಕಾಲ ನಡೆದ ಹಬ್ಬದಲ್ಲಿ ದೀಪಾರಾಧನೆ, ದೇವರ ನೃತ್ಯಬಲಿ ನಡೆಯಿತು. ಮುಖ್ಯ ಹಬ್ಬದಂದು ಮಧ್ಯಾಹ್ನ ಎತ್ತುಪೋರಾಟ, ಬೊಳಕಾಟ್, ದುಡಿಕೊಟ್ ಪಾಟ್, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ನೆರವೇರಿತು. ರಾತ್ರಿ ದೇವರ ಅವಭೃತ ಸ್ನಾನ ಹಾಗೂ ನೃತ್ಯಬಲಿ ನಡೆಯಿತು.

ಈ ಸಂದರ್ಭ ದೇವಾಲಯದ ತಕ್ಕರಾದ ವಾಂಜAಡ ಬೋಪಯ್ಯ, ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಉಪಾಧ್ಯಕ್ಷ ಕಾಟುಮಣಿಯಂಡ ಉಮೇಶ್, ಕಾರ್ಯದರ್ಶಿ ಪುಲ್ಲೇರ ವಿಠಲ ಪಳಂಗಪ್ಪ, ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಾಲಯದ ಮುಖ್ಯ ಅರ್ಚಕ ಕೀರ್ತಿಶ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.