ನಾಪೋಕ್ಲು, ಏ. ೧೭: ಸಮೀಪದ ನೆಲಜಿ ಶ್ರೀ ಭಗವತಿ (ಪೋವದಿಯಮ್ಮೆ) ದೇವಾಲಯದಲ್ಲಿ ವಾರ್ಷಿಕ ಉತ್ಸವವು. ವಿಜೃಂಭಣೆಯಿAದ ನಡೆಯಿತು. ಎತ್ತು ಪೋರಾಟ, ಆಂಗೋಲ ಪೊಂಗೋಲ ಸೇವೆ, ವಿವಿಧ ಪೂಜಾ ಸೇವೆಗಳು, ಪ್ರಸಾದ ವಿತರಣೆ ಮತ್ತು ದೇವರ ನೃತ್ಯ ಬಲಿ ನಡೆಯಿತು..
ಭಾನುವಾರ ಸಂಜೆ ಶ್ರೀ ದೇವಿಯ ಸನ್ನಿಧಿಯಲ್ಲಿ ಪೀಲಿ ಆಟ್, ದೇವಿಯ ನೃತ್ಯ ಬಲಿ ಹಾಗೂ ಪೂಜಾ ಸೇವೆಗಳು ನಡೆದವು. ಭಕ್ತರು ಶ್ರದ್ಧಾ ಭಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನೆಲಜಿ ಶ್ರೀ ಭಗವತಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಊರ ಹಾಗೂ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.