ಮಡಿಕೇರಿ, ಏ. ೧೭: ವಿಧಾನಸಭಾ ಚುನಾವಣೆ ಸಂಬAಧ ಇಂದು ವಿವಿಧ ರಾಜಕೀಯ ಪಕ್ಷಗಳ ವತಿಯಿಂದ ನಾಮಪತ್ರ ಸಲ್ಲಿಸುವ ಸಂದರ್ಭ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಭಾರತೀಯ ಜನತಾ ಪಕ್ಷಕ್ಕೆ ಸಂಬAಧಿಸಿದ ವಾಹನ (ಕೆಎ-೫೧-ಎನ್-೯೨೩೬) ಅನುಮತಿ ಪಡೆಯದೆ ಪಕ್ಷದ ಧ್ವಜವನ್ನು ಹಾಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಪಕ್ಷಕ್ಕೆ ಸಂಬAಧಿಸಿದ ವಾಹನ (ಕೆಎ-೦೫ ಎನ್-೫೨೯೭) ಮತ್ತು (ಕೆಎ-೩೨-ಎಂ೭೪೩೧)ಗಳಲ್ಲಿ ಅನುಮತಿ ಪಡೆಯದೆ ಪಕ್ಷದ ಧ್ವಜವನ್ನು ಹಾಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ.

ಕಾಂಗ್ರೆಸ್ ಪಕ್ಷದ ವತಿಯಿಂದ ಅನುಮತಿ ಪಡೆಯದೆ ಬಳಕೆ ಮಾಡಿರುವ ಇತರೆ ವಾಹನಗಳ ಬಗ್ಗೆ ವೀಡಿಯೋ ಸರ್ವೆಲೆನ್ಸ್ ತಂಡದಿAದ ವರದಿ ಬಂದಿದ್ದು, ಅವುಗಳ ಬಗ್ಗೆ ಪರಿಶೀಲಿಸಿ ನಿಯಾಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.