ಕೂಡಿಗೆ, ಏ. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಮೂಲಕ ಹಾದು ಹೋಗಿರುವ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಸಮೀಪದಲ್ಲಿ ಅರಣ್ಯ ಇಲಾಖೆಯವರು ಮೀಸಲು ಅರಣ್ಯ ಪ್ರದೇಶ ಜಾಗವೆಂದು ನೀರಾವರಿ ಇಲಾಖೆಯ ನಾಲೆಯ ಹದ್ದುಬಸ್ತು ಜಾಗಕ್ಕೆ ಗಡಿ ಕಲ್ಲು ಅಳವಡಿಸಿ ತಿಂಗಳುಗಳು ಕಳೆದರೂ, ನೀರಾವರಿ ಇಲಾಖೆಯ ವತಿಯಿಂದ ಪತ್ರವ್ಯವಹಾರ ನಡೆದರೂ ಸಹ ಇನ್ನೂ ಗಡಿ ಕಲ್ಲು ಮಾತ್ರ ಮುಖ್ಯ ನಾಲೆಯ ಸಮೀಪವೇ ಇದ್ದು, ತೆರವಾಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ಯಡವನಾಡು ಮತ್ತು ಹುದುಗೂರು ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಜಾಗವೆಂದು ಗುರುತಿಸಿ ಗಡಿ ಕಲ್ಲುಗಳನ್ನು ನೆಡುವ ಸಂದರ್ಭದಲ್ಲಿ ತಡೆಹಿಡಿದ ಘಟನೆ ನಡೆದಿದೆ.

ಆದರೆ ರಾಜ್ಯ ಕಾವೇರಿ ನೀರಾವರಿ ನಿಗಮದ ಸೂಚನೆಯಂತೆ ಹಾರಂಗಿ ಅಭಿಯಂತರ ಆದೇಶದಂತೆ ಮೈಸೂರು ವಿಭಾಗದ ಅರಣ್ಯ ಇಲಾಖೆಯವರಿಗೆ ಪತ್ರವ್ಯವಹಾರ ಮಾಡಲಾಗಿತ್ತು. ಆದರೆ ಇದುವರೆಗೂ ಗಡಿ ಕಲ್ಲಿನ ತೆರವು ಮಾತ್ರ ನಡೆದಿಲ್ಲ. ಕಾರ್ಯಸೂಚಿಯಂತೆ ನೀರಾವರಿ ಇಲಾಖೆಯ ಮೂಲಕ ಪತ್ರವ್ಯವಹಾರ ನಡೆದರೂ ಸಹ ೫೫ ವರ್ಷಗಳ ಹಿಂದಿನ ಕಾಲದಲ್ಲಿ ನೀರಾವರಿ ಇಲಾಖೆಗೆ ಜಾಗವನ್ನು ಗುರುತಿಸಿ ನೀಡಲಾದರೂ ಸಹ ಇತ್ತೀಚಿನ ದಿನಗಳಲ್ಲಿ ಮೈಸೂರು ವಿಭಾಗದವರು ಗಡಿ ಕಲ್ಲು ಗುರುತಿಸಿರುವುದು ಸರಿಯಾದ ಕ್ರಮವಲ್ಲ ಎಂದು ರಾಮಲಿಂಗೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷರ ಹುದುಗೂರು ಐ.ಎಸ್. ಗಣೇಶ್ ಆರೋಪಿಸಿರುತ್ತಾರೆ.

ಈಗಾಗಲೇ ಹಾರಂಗಿಯಿAದ ಕೊಡಗಿನ ಗಡಿ ಭಾಗದವರೆಗೆ ಮುಖ್ಯ ನಾಲೆಯ ದುರಸ್ತಿಗೆ ಸಂಬAಧಿಸಿದ ಕಾಮಗಾರಿಗಳಿಗೆ ನಿಗಮದ ವತಿಯಿಂದ ಹಣ ಬಿಡುಗಡೆಯಾಗಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯು ನಡೆದಿವೆ ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭವಾದಾಗ ಅರಣ್ಯ ಇಲಾಖೆಯ ತಡೆಹೊಡಿದರೆ ನಾಲೆಯ ಕಾಮಗಾರಿಯು ಸ್ಥಗಿತಗೊಳುವುದು ಇದರಿಂದಾಗಿ ಮುಖ್ಯ ನಾಲೆ ನೀರು ಹರಿಯುವಿಕೆ ಯಲ್ಲಿ ಬಾರಿ ತೊಂದರೆಗಳು ಉಂಟಾಗುವುದರಿAದ ಕೊನೆಯ ಭಾಗದ ರೈತರಿಗೆ ಬೇಸಾಯ ಮಾಡಲು ಸಾಧ್ಯವಾಗುವುದಿಲ್ಲ, ಸಂಬAಧಿಸಿದ ಎರಡು ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮರ್ಪಕವಾದ ತೀರ್ಮಾನ ಕೈಗೊಳ್ಳುವಂತೆ ಈ ವ್ಯಾಪ್ತಿಯ ಗ್ರಾಮಸ್ಥರ ಆಗ್ರಹವಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ.