ಕೂಡಿಗೆ, ಏ. ೧೭: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ೨೦೨೩-೨೪ನೇ ಸಾಲಿಗೆ ರಾಜ್ಯ ಮಟ್ಟದ ಕ್ರೀಡಾ ವಸತಿ ಶಾಲೆ, ವಸತಿ ನಿಲಯಗಳಿಗೆ ಪ್ರವೇಶ ನೀಡುವ ಸಂಬAಧ ಕಿರಿಯರ ವಿಭಾಗದ ಕ್ರೀಡಾಪಟುಗಳ ಆಯ್ಕೆಯ ಬಗ್ಗೆ ಅಂತಿಮ ಪರಿಶೀಲನಾ ಆಯ್ಕೆ ಪ್ರಕ್ರಿಯೆ ಶಿಬಿರವು ತಾ. ೧೮ರಿಂದ (ಇಂದಿನಿAದ) ತಾ. ೨೪ರವರೆಗೆ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ.
ಹಾಕಿ, ಫುಟ್‌ಬಾಲ್, ಜಿಮ್ನಾಸ್ಟಿಕ್ಸ್ ಕ್ರೀಡೆಗಳ ಅಂತಿಮ ಆಯ್ಕೆ ಪರಿಶೀಲನಾ ಕಾರ್ಯಚಟು ವಟಿಕೆಗಳು ಕೂಡಿಗೆ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ನಿಯೋಜಿತ ಅಧಿಕಾರಿ ದೇವಕುಮಾರ್, ಶಿಬಿರಾಧಿಕಾರಿ ಹಾಕಿ ತರಬೇತಿ ದಾರರಾದ ಬಿ.ಎಸ್. ವೆಂಕಟೇಶ್ ತಿಳಿಸಿದ್ದಾರೆ.