ಸೋಮವಾರಪೇಟೆ, ಏ. ೧೮: ೮ ಗ್ರಾಮಗಳು ಒಟ್ಟಿಗೆ ಸೇರಿ ಪ್ರತಿವರ್ಷ ಆಚರಿಸುವ ಕುಮಾರಳ್ಳಿ ಶ್ರೀ ಸಬ್ಬಮ್ಮದೇವರ ಸುಗ್ಗಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಪ್ರಕೃತಿಯನ್ನು ಆರಾಧಿಸುವ ಸಾಂಪ್ರಾದಾಯಿಕ ಪೂಜೆಗಳು ಸುಗ್ಗಿಕಟ್ಟೆಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದವು. ದೀಪಬೆಳಗುವುದು, ಕೋಲು ಹೊಡೆಯುವುದು, ದೀಪ ತೂಗುವುದು, ಕೆಂಡ ಹಾಯುವುದು, ಬಿಲ್ಲು ಹೊಡೆಯುವುದು, ಕೋಲಾಟ, ಹುಲ್ಲು ಸುತ್ತಿಕೊಂಡು ನೃತ್ಯ ಇತ್ಯಾದಿ ಗ್ರಾಮೀಣ ಆಚರಣೆಗಳು ನಡೆದವು.

ರಾತ್ರಿ ಕುಮಾರಳ್ಳಿ, ಹಂಚಿನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಮಲ್ಲಳ್ಳಿ, ಮಾಲ್‌ಮನೆ, ಕೋಡಳ್ಳಿ, ಬಾಚಳ್ಳಿ ಗ್ರಾಮಸ್ಥರು ಗ್ರಾಮದ ಸುಭಿಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.