ಮಡಿಕೇರಿ, ಏ. ೧೮: ಭಾರತೀಯ ವಾಯುಪಡೆಯಲ್ಲಿ ಕರ್ತವ್ಯದಲ್ಲಿರುವ ಜಿಲ್ಲೆಯವರಾದ ಯುವ ಅಧಿಕಾರಿ ವಿಂಗ್ ಕಮಾಂಡರ್ ಮಂದಪAಡ ತಿಮ್ಮಯ್ಯ ಅವರಿಗೆ ವೆಲ್ಲಿಂಗ್ಟನ್ ಸ್ಟಾಫ್ ಕಾಲೇಜಿನಲ್ಲಿ ತೋರಿರುವ ಸಾಧನೆಗಾಗಿ ಜನರಲ್ ತಿಮ್ಮಯ್ಯ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸ್ಟಾಫ್ ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ತೋರುವ ಅಧಿಕಾರಿಗಳಿಗೆ ಪ್ರಥಮ ಸ್ಥಾನಕ್ಕೆ ಫೀ.ಮಾ. ಮಾಣಿಕ್ ಷಾ ಪ್ರಶಸ್ತಿ ಹಾಗೂ ಎರಡನೆಯ ಸ್ಥಾನಕ್ಕೆ ಜನರಲ್ ತಿಮ್ಮಯ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದೀಗ ತಿಮ್ಮಯ್ಯ ಅವರು ತಮ್ಮ ಸಾಧನೆಗಾಗಿ (ಬೆಸ್ಟ್ ಆಲ್ರೌಂಡ್ ಸಾಧನೆ) ಎರಡನೇ ಸ್ಥಾನ ಪಡೆಯುವುದರೊಂದಿಗೆ ಇವರಿಗೆ ಜನರಲ್ ತಿಮ್ಮಯ್ಯ ಪ್ರಶಸ್ತಿ ನೀಡಲಾಗಿದೆ.
ಈ ಹಿಂದೆ ಸ್ಕಾ÷್ವಡ್ರನ್ ಲೀಡರ್ ಆಗಿದ್ದ ತಿಮ್ಮಯ್ಯ ವಿಂಗ್ ಕಮಾಂಡರ್ ಆಗಿ ಬಡ್ತಿಯನ್ನು ಪಡೆದಿದ್ದಾರೆ. ಇವರು ಬೇಂಗೂರಿನವರಾದ ಮಂದಪAಡ ಚಂಗಪ್ಪ (ಸದ) ಹಾಗೂ ಗೌರಮ್ಮ (ರಜನಿ - ತಾಮನೆ : ಇಟ್ಟಿರ) ದಂಪತಿ ಪುತ್ರ.