ಚೆಟ್ಟಳ್ಳಿ, ಏ. ೧೮: ಭಾಗಮಂಡಲ ಭಗಂಡೇಶ್ವರ ಸನ್ನಿಧಿಯ ಮುಂದಿರುವ ಪವಿತ್ರ ತ್ರಿವೇಣಿ ಸಂಗಮದ ಮಹಿಳಾ ಬಟ್ಟೆ ಬದಲಿಸುವ ಕೋಣೆಯೊಳಗಿನ ಕಸದ ಬುಟ್ಟಿಯಲ್ಲಿ ಮಹಿಳೆ ಬಳಸಿದ ಸ್ಯಾನಿಟರಿ ಪ್ಯಾಡನ್ನು ಹಾಕಿ ಅಪವಿತ್ರಗೊಳಿಸಲಾಗಿದೆ.

ಮಹಿಳೆಯರು ಮುಟ್ಟಿನ ಸಮಯದಲ್ಲಿ ದೇವಾಲಯಗಳಿಗೆ ಹೋಗಬಾರದೆಂಬ ನಿಯಮವಿದೆ. ಆದರೆ ಮುಟ್ಟಿನ ಮಹಿಳೆ ತ್ರಿವೇಣಿ ಸಂಗಮದಲ್ಲಿ ಮಿಂದು ಅಪವಿತ್ರಗೊಳಿಸಿದಲ್ಲದೆ ಮಹಿಳೆಯರು ಬಟ್ಟೆಬದಲಿಸುವ ಕೋಣೆಯಲ್ಲಿ ಬಳಸಿದ ಸ್ಯಾನಿಟರಿ ಪ್ಯಾಡ್ ಹಾಕಿರುವ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಹಿಳೆಯರು ಬಟ್ಟೆ ಬದಲಿಸುವ ಕೋಣೆಗೆ ಬಾಗಿಲುಗಳೆ ಇಲ್ಲ. ಅಲ್ಲಿನ ಅವ್ಯವಸ್ಥೆಯ ಬಗ್ಗೆ ಮೇಲ್ವಿಚಾರಕರಿಗೆ ವಿಷಯ ಮುಟ್ಟಿಸಿ ಕ್ರಮಕೈಗೊಳ್ಳುವ ಬಗ್ಗೆ ಮನವರಿಕೆ ಮಾಡಿದ್ದಾರೆ. ಪ್ರವಾಸಕ್ಕೆಂದು ತೆರಳುವ ಮಹಿಳೆಯರ ಬಗ್ಗೆ ನಿಗಾವಹಿಸದಿದ್ದರೆ ಮೋಜುಮಸ್ತಿಯ ತಾಣವಾಗಿ ಮಾರ್ಪಾ ಡಾಗುವ ಕುಲದೇವಿ ಕಾವೇರಿ ಸನ್ನಿಧಿ ದಿನೇದಿನೇ ಮಲೀನಗೊಳ್ಳುತ್ತದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

-ಕಾಳಯ್ಯ