ಮಡಿಕೇರಿ, ಏ. ೧೮: ಜಿಲ್ಲಾಧಿಕಾರಿಗಳ ಅಥವಾ ಚುನಾವಣಾಧಿ ಕಾರಿಗಳ ಯಾವುದೇ ಆದೇಶ ವಿಲ್ಲದಿದ್ದರೂ ಕೊಡಗಿನಲ್ಲಿ ಜಮ್ಮಾ ಹಿಡುವಳಿದಾರ ರಿಂದಲೂ ಪೊಲೀಸ್ ಇಲಾಖೆ ಬಲಾತ್ಕಾರವಾಗಿ ಕೋವಿ ವಶಪಡಿಸಿ ಕೊಳ್ಳುತ್ತಿದ್ದು, ಇದಕ್ಕೆ ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪಕ್ಷದ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಅವರು ಈ ಕ್ರಮವನ್ನು ತಕ್ಷಣ ಕೈ ಬಿಡುವಂತೆ ಒತ್ತಾಯಿಸಿ ದ್ದಾರೆ. ಪ್ರತಿ ಚುನಾವಣೆಯ ಸಂದರ್ಭ ದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಚುನಾವಣಾ ಧಿಕಾರಿಗಳ ಆದೇಶದಂತೆ ಲೈಸನ್ಸ್ ಪಡೆದು ಕೋವಿಯನ್ನು ಬಳಸಿ ಕೊಳ್ಳುತ್ತಿರುವ ಕೋವಿಯನ್ನು ಪೊಲೀಸ್ ಇಲಾಖೆ ಡಿಪಾಸಿಟ್ ರೂಪದಲ್ಲಿ ಪಡೆದು ಇಟ್ಟು ಕೊಳ್ಳುತ್ತಿರುವುದು ಸಾಮಾನ್ಯ ಸಂಗತಿ. ಈ ಕ್ರಮಕ್ಕೆ ಕೊಡಗಿನ ಜನತೆ ಕೂಡ ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಆದರೆ, ಜಮ್ಮಾ ಹಿಡುವಳಿದಾರರ ಕೋವಿಗಳಿಗೆ ಇದರಿಂದ ಈ ಹಿಂದಿನಿAದಲೂ ವಿನಾಯಿತಿ ಇತ್ತು. ಆದರೆ, ಈ ಬಾರಿ ಜಿಲ್ಲಾಧಿಕಾರಿಗಳ ಅಥವಾ ಚುನಾವಣಾಧಿಕಾರಿಗಳ ಯಾವುದೇ ಆದೇಶ ಮತ್ತು ಮುನ್ಸೂಚನೆ ಇಲ್ಲದೆ ಜಮ್ಮಾ ಹಿಡುವಳಿದಾರರ ಮನೆಗಳಿಗೆ ಪೊಲೀಸರು ತೆರಳಿ ಕೋವಿ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ.
ಪೊಲೀಸರ ಈ ದಿಢೀರ್ ಕ್ರಮದಿಂದ
(ಮೊದಲ ಪುಟದಿಂದ) ಅನವಶ್ಯ ಕಿರುಕುಳ ಜಮ್ಮಾಹಿಡುವಳಿ ಕೋವಿ ಮಾಲೀಕರಿಗೆ ಆಗುತ್ತಿದ್ದು, ಈ ಬಗ್ಗೆ ಕೊಡಗಿನ ಜಮ್ಮಾ ಹಿಡುವಳಿದಾರರ ಪರವಾಗಿ ಕೊಡಗು ಜಿಲ್ಲಾ ಬಿಜೆಪಿ ರಾಜ್ಯದ ಗೃಹಮಂತ್ರಿ ಸೇರಿದಂತೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ ಎಂದು ಮಹೇಶ್ ಜೈನಿ ತಿಳಿಸಿದ್ದಾರೆ. ಈ ಕ್ರಮವನ್ನು ತಕ್ಷಣ ನಿಲ್ಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಎಂ.ಬಿ. ದೇವಯ್ಯ ಆಗ್ರಹ
ಚುನಾವಣಾ ನೀತಿ ಸಂಹಿತೆ ಯ ನೆಪದಲ್ಲಿ ಕೊಡಗಿನ ಜಮ್ಮಾ ಹಿಡು ವಳಿದಾರರ ಕೋವಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ತೀವ್ರವಾಗಿ ವಿರೋಧಿ ಸುವುದಾಗಿ ಶ್ರೀ ಕಾವೇರಮ್ಮ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ. ದೇವಯ್ಯ ಅವರು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು ಪೊಲೀಸ್ ಇಲಾಖೆಗೆ ಈ ಕುರಿತು ನಿರ್ದೇಶನ ನೀಡಬೇಕು ಎಂದು ದೇವಯ್ಯ ಒತ್ತಾಯಿಸಿದ್ದಾರೆ. ಈಗಾಗಲೇ ರಾಜ್ಯ ಚುನಾವಣಾ ಅಧಿಕಾರಿಗಳು ಹಾಗೂ ಗೃಹ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.