(ಕಾಯಪAಡ ಶಶಿ ಸೋಮಯ್ಯ)

ಮಡಿಕೇರಿ, ಏ. ೧೮: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಹಬ್ಬ ಮುಕ್ತಾಯಗೊಂಡ ಬೆನ್ನಲ್ಲೇ ಇದೀಗ ನಾಲ್‌ನಾಡ್ ವ್ಯಾಪ್ತಿಯ ನಾಪೋಕ್ಲುವಿನಲ್ಲೇ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಸಂಭ್ರಮವೂ ಆರಂಭಗೊಳ್ಳಲಿದೆ.

ತಾ. ೨೨ ರಿಂದ ನಾಪೋಕ್ಲುವಿನಲ್ಲಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಈ ಬಾರಿ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ - ೨೦೨೩ ಶುಭಾರಂಭ ಗೊಳ್ಳಲಿದೆ. ೨೦೦೦ನೇ ಇಸವಿಯಲ್ಲಿ ಕೀತಿಯಂಡ ಕುಟುಂಬ ಪ್ರಮುಖರಾದ ಕಾರ್ಸನ್ ಕಾರ್ಯಪ್ಪ ಮತ್ತಿತರರ ಚಿಂತನೆಯೊAದಿಗೆ ಕೊಡವ ಹಾಕಿ ನಮ್ಮೆಯ ಮಾದರಿಯಲ್ಲೇ ಕೌಟುಂಬಿಕ ಕ್ರಿಕೆಟ್ ನಮ್ಮೆಯನ್ನು ಪ್ರಾರಂಭಿಸಿದ್ದರು. ಇದೀಗ ೨೧ನೆಯ ವರ್ಷದ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.

೨೦೧೮ರಲ್ಲಿ ಮಡಿಕೇರಿಯಲ್ಲಿ ಮಡ್ಲಂಡ ಕಪ್ ಕ್ರಿಕೆಟ್ ನಡೆದಿದ್ದು, ನಂತರದ ಮೂರು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪ, ಕೊರೊನಾ ಕಾರಣದಿಂದಾಗಿ ಪಂದ್ಯಾಟ ಸ್ಥಗಿತ ಗೊಂಡಿತ್ತು. ೨೦೨೨ರಲ್ಲಿ ಅಮ್ಮತ್ತಿಯಲ್ಲಿ ಪೊರುಕೊಂಡ ಕಪ್‌ನ ಮೂಲಕ ಕ್ರಿಕೆಟ್ ಉತ್ಸವ ಮರು ಚಾಲನೆಗೊಂಡು ಕಳೆದ ವರ್ಷ ೧೯೩ ಕುಟುಂಬಗಳು ಭಾಗಿಯಾಗಿದ್ದವು.

ಈ ಬಾರಿ ದಾಖಲೆಯ ತಂಡಗಳು

ಇದೀಗ ೨೧ನೇಯ ವರ್ಷದ ಕ್ರಿಕೆಟ್ ಅನ್ನು ನಾಪೋಕ್ಲು ಹಾಗೂ ನೆಲಜಿ ಮೂಲದವರಾದ ಬಾಳೆಯಡ ಕುಟುಂಬಸ್ಥರು ಆಯೋಜಿಸುತ್ತಿದ್ದಾರೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಈ ತನಕದ ದಾಖಲೆ ಎಂಬAತೆ ೨೫೨ ಕುಟುಂಬಗಳು ಹೆಸರು ನೋಂದಾಯಿಸಿಕೊAಡಿವೆ. ಈ ಬಾರಿಯ ಪಂದ್ಯಾವಳಿಗೆ ಒಟ್ಟು ೨೫೨ ಕುಟುಂಬಗಳು ಹೆಸರು ನೋಂದಾಯಿಸಿಕೊAಡಿರುವುದು ವಿಶೇಷವಾಗಿದೆ. ಕಳೆದ ೨೧ ವರ್ಷಗಳ ಇತಿಹಾಸದಲ್ಲಿ ಇದು ನೂತನ ದಾಖಲೆಯಾಗಿದೆ. ಈಗಾಗಲೇ ಟೈಸ್ ಬಿಡುಗಡೆ ಪ್ರಕ್ರಿಯೆಯೂ ನಡೆದಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಒಲಂಪಿಯನ್ ಕರ್ನಲ್ ಬಾಳೆಯಡ ಕೆ. ಸುಬ್ರಮಣಿ ಅವರು ಮಾಹಿತಿ ನೀಡಿದ್ದಾರೆ.

ತಾ. ೨೨ ರಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ

(ಮೊದಲ ಪುಟದಿಂದ) ಪ್ರಾರಂಭಗೊಳ್ಳಲಿದ್ದು, ಚುನಾವಣೆಯ ಕಾರಣದಿಂದಾಗಿ ಮೇ ೨೦ರ ವೇಳೆಗೆ ಫೈನಲ್ ಪಂದ್ಯಾಟವನ್ನು ನಿಗದಿಪಡಿಸಲಾಗುವುದು. ಈ ಬಗ್ಗೆ ಟೈಸ್ ನೋಡಿಕೊಂಡು ತೀರ್ಮಾನ ಕೈಗೊಳ್ಳಲಿರುವುದಾಗಿ ಸುಬ್ರಮಣಿ ಹಾಗೂ ಸಮಿತಿಯ ಪ್ರತೀಶ್ ಪೂವಯ್ಯ ಅವರು ತಿಳಿಸಿದ್ದಾರೆ. ೨೦೧೮ರ ಮಡ್ಲಂಡ ಕಪ್‌ನಲ್ಲಿ ೨೨೦ ಕುಟುಂಬಗಳು ಭಾಗಿಯಾಗಿದ್ದು, ಈತನಕದ ದಾಖಲೆಯಾಗಿತ್ತು.

ಈಗಾಗಲೇ ಕುಟುಂಬ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಉತ್ಸವ ಎಂಬದರ ಜತೆಗೆ ಆಟಕ್ಕೂ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ. ಕೊಡವ ಕ್ರಿಕೆಟ್ ಅಕಾಡೆಮಿಯ ಅಧೀನದಲ್ಲಿ ಹಾಗೂ ಸಹಕಾರದೊಂದಿಗೆ ಈ ಪಂದ್ಯಾವಳಿ ನಡೆಸುತ್ತಿರುವುದಾಗಿ ಮಾಹಿತಿಯಿತ್ತರು.

ಮಹಿಳಾ ತಂಡಗಳ ಪ್ರದರ್ಶನ ಪಂದ್ಯ

ತಾ. ೨೨ ರಂದು ಉದ್ಘಾಟನಾ ದಿನದಂದು ಟಿ. ಶೆಟ್ಟಿಗೇರಿಯ ಸಂಭ್ರಮ ಪೊಮ್ಮಕ್ಕಡ ತಂಡ ಹಾಗೂ ಚೆಟ್ಟಳ್ಳಿ ಕೊಡವತಿಯರ ತಂಡದ ನಡುವೆ ವಿಶೇಷ ಆಕರ್ಷಣೆಯಾಗಿ ಪ್ರದರ್ಶನ ಪಂದ್ಯವನ್ನು ಏರ್ಪಡಿಸಲಾಗಿದೆ. ಇದಾದ ನಂತರ ನಿಗದಿಯಂತೆ ಪಂದ್ಯಾಟ ಜರುಗಲಿದೆ. ಕುಟುಂಬದ ಅಧ್ಯಕ್ಷ ಬಿ.ಕೆ. ಮಂದಪ್ಪ ಸೇರಿದಂತೆ ಉತ್ಸವ ಸಮಿತಿಯ ಪದಾಧಿಕಾರಿಗಳು, ಕುಟುಂಬಸ್ಥರು ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಕರ್ನಲ್ ಎಂ.ಡಿ. ಮುತ್ತಪ್ಪ, ಮಾಜಿ ಒಲಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ, ಮಹಾವೀರ ಚಕ್ರ ಪುರಸ್ಕೃತರಾಗಿರುವ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.