ಭಾಗಮAಡಲ, ಏ. ೧೮: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆ ಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ಕ್ರಿಕೆಟ್‌ನಲ್ಲಿ ಉಳುವಾರನ, ಮೇಲ್ಚೆಚೆಂಬು ಮತ್ತು ಕುದುಪಜೆ ತಂಡಗಳು ಮುಂದಿನ ಹಂತ ಪ್ರವೇಶಿಸಿದವು.

ತೊತ್ತಿಯನ ಮತ್ತು ಕುದುಪಜೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೊತ್ತಿಯನ ತಂಡ ೮೪ ರನ್ ಗಳಿಸಿತು. ಕುದುಪಜೆ ತಂಡ ಮೂರು ವಿಕೆಟ್ ನಷ್ಟಕ್ಕೆ ೮೫ ರನ್ ಗಳಿಸಿ ಗೆಲುವು ಸಾಧಿಸಿತು. ಬೈಮನ ಮತ್ತು ಕುದುಪಜೆ ತಂಡಗಳ ನಡುವಿನ ಪಂದ್ಯದಲ್ಲಿ ಬೈಮನ ತಂಡವು ೩೬ ರನ್ ಗಳಿಸಿದರೆ ಕುದುಪಜೆ ತಂಡವು ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. ಪೊಡನೋಳನ ಮತ್ತು ಮೇಲ್ಚೆಚೆಂಬು ತಂಡಗಳ ನಡುವಿನ ಪಂದ್ಯದಲ್ಲಿ ಮೇಲ್ಚೆಚೆಂಬು ತಂಡ ಮೊದಲು ಬ್ಯಾಟ್ ಮಾಡಿ ೮೬ ರನ್ ಗಳಿಸಿತು. ಪೊಡನೋಳನ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು ೫೯ ರನ್ ಗಳಿಸಿ ಸೋಲನ್ನು ಅನುಭವಿಸಿತು. ಕುಯ್ಯಮುಡಿ ಮತ್ತು ಉಳುವಾರನ ತಂಡಗಳ ನಡುವಿನ ಪಂದ್ಯದಲ್ಲಿ ಕುಯ್ಯಮುಡಿ ಏಳು ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಿತು. ಉಳುವಾರನ ತಂಡ ಎಂಟು ವಿಕೆಟ್‌ಗೆ ೬೭ ರನ್ ಗಳಿಸಿ ಗೆಲುವು ಸಾಧಿಸಿತು. ಕಟ್ಟೆಮನೆ ಮೇರ್ಕಜೆ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಟ್ಟೆಮನೆ ತಂಡದ ಆಟಗಾರ ರೋಷನ್ ೧೯ ಬಾಲ್‌ಗೆ ೮೮ ರನ್ ಸೇರಿದಂತೆ ಒಟ್ಟು ೧೧೨ ರನ್ ಮಾಡಿ ಕಟ್ಟೆಮನೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಮೇರ್ಕಜೆ ತಂಡ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ ೪೭ ರನ್ ಗಳಿಸಿತು.

ಕಟ್ಟೆಮನೆ ಮತ್ತು ಉಳುವಾರನ ತಂಡಗಳ ನಡುವಿನ ಪಂದ್ಯದಲ್ಲಿ ಕಟ್ಟೆಮನೆ ತಂಡ ೨೪ ರನ್ ಗಳಿಸಿದರೆ, ಉಳುವಾರನ ತಂಡ ನಾಲ್ಕು ವಿಕೆಟ್ ಗೆಲುವು ಸಾಧಿಸಿತು. -ಸುನಿಲ್