ಪಿತ್ತ ಜನಕಾಂಗ (ಐiveಡಿ) ನಮ್ಮ ದೇಹದ ಎರಡನೇ ಪ್ರಮುಖ ಅಂಗ. ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆ, ಆಹಾರದಲ್ಲಿನ ಜೀವಸತ್ವ, ಲವಣ ಒಳಗೊಂಡ ಪೋಷಕಾಂಶಗಳ ಸಂಗ್ರಹ ಮತ್ತು ಅಗತ್ಯವಿರುವಾಗ ಒದಗಿಸುವಿಕೆ, ಪಿತ್ತ ರಸ ಬಿಡುಗಡೆಯೊಂದಿಗೆ ಕೊಬ್ಬು ಕರಗಿಸುವಿಕೆ, ರಕ್ತದಿಂದ ವಿಷಕಾರಿ ಅಂಶ ಸೇರಿದಂತೆ ತ್ಯಾಜ್ಯಗಳ ಹೊರದೂಡುವಿಕೆ, ರಕ್ತ ಹೆಪ್ಪುಗಟ್ಟುವಿಕೆ ನಿಯಂತ್ರಣ, ರೋಗ ನಿರೋಧಕ ಶಕ್ತಿವರ್ಧನೆ ಸೇರಿದಂತೆ ಸುಮಾರು ಐನೂರು ಪ್ರಮುಖ ಕಾರ್ಯಗಳನ್ನು ಪಿತ್ತ ಜನಕಾಂಗ ಅಥವಾ ಯಕೃತ್ತು ನಿರ್ವಹಿಸುತ್ತದೆ.
ದೇಶದಲ್ಲಿ ಮತ್ತು ರಾಜ್ಯದಲ್ಲಿ ಇತ್ತೀಚೆಗೆ ಮಾರಣಾಂತಿಕ ಕೊಬ್ಬಿನ ಪಿತ್ತ ಜನಕಾಂಗ ಕಾಯಿಲೆ (ಈಚಿಣಣಥಿ ಐiveಡಿ) ಪ್ರಕರಣಗಳ ಹೆಚ್ಚಳ ಆತಂಕಕಾರಿ ಬೆಳವಣಿಗೆಯಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ. ೯ ರಿಂದ ಶೇ. ೩೨ ರ ಪ್ರಮಾಣದಲ್ಲಿ ನಾಗರಿಕರು ಈ ಕಾಯಿಲೆಯಿಂದ ಬಾಧಿತರಾಗಿದ್ದಾರೆ. ಇನ್ನು ಮುಂದೆ ಇದು ಸಾಮಾನ್ಯ ಸ್ಥಳೀಯ ಕಾಯಿಲೆ ಎನ್ನುವಷ್ಟರ ಮಟ್ಟಿಗೆ ವ್ಯಾಪಿಸಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ.
ಬದಲಾಗಿರುವ ಆಹಾರ ಶೈಲಿ ಮತ್ತು ಬದಲಾಗಿರುವ ಜೀವನ ಕ್ರಮದಿಂದ ಪಿತ್ತ ಜನಕಾಂಗದಲ್ಲಿ ಹೆಚ್ಚುವರಿಯಾಗಿ ಕೊಬ್ಬು ಸಂಗ್ರಹವಾಗತೊಡಗಿ ಸಮಸ್ಯೆ ಆರಂಭವಾಗುತ್ತದೆ. ಮದ್ಯ ವ್ಯಸನಿಗಳನ್ನು ಈ ಕಾಯಿಲೆ ಹೆಚ್ಚಿಗೆ ಕಾಡುತ್ತದೆ ಎನ್ನುವಂತಿಲ್ಲ. ಈಗ ಮದ್ಯಪಾನದ ಅಭ್ಯಾಸವಿಲ್ಲದಿರುವವರಲ್ಲಿಯೂ ಕೊಬ್ಬಿನ ಪಿತ್ತ ಜನಕಾಂಗ ಸಮಸ್ಯೆ (ಓಚಿಜಿಟಜ) ಹೆಚ್ಚತೊಡಗಿದೆ. ಆರಂಭದಲ್ಲಿ ಯಾವುದೇ ಗುಣಲಕ್ಷಣಗಳಿಲ್ಲದಿರುವುದರಿಂದ ಇದು ಪತ್ತೆಯಾಗುವುದಿಲ್ಲ. ಅಲ್ಟಾçಸೌಂಡ್, ಲಿವರ್ ಇಲ್ಯಾಸ್ಟೋಗ್ರಫಿ ಅಥವಾ ಫೈಬ್ರೋಸ್ಕಾö್ಯನ್ ಮಾಡಿದಾಗ ನಿಖರವಾಗಿ ಪತ್ತೆ ಹಚ್ಚಬಹುದು ಎಂದು ವೈದ್ಯರು ಸ್ಪಷ್ಟಪಡಿಸುತ್ತಾರೆ.
ಈಗ ಈ ಕಾಯಿಲೆ ೧೩ ರಿಂದ ೧೮ ವರ್ಷದ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಸಾಮಾನ್ಯವಾಗಿ ಕಣ್ಣು ಮತ್ತು ತ್ವಚೆ ಹಳದಿ ಬಣ್ಣಕ್ಕೆ ತಿರುಗಿದರೆ ನಿರ್ಲಕ್ಷಿಸುವಂತಿಲ್ಲ. ಗಾಢ ಮೂತ್ರ, ಕಿಬ್ಬೊಟ್ಟೆಯ ನೋವು, ಸೆಳೆತ, ಹೊಟ್ಟೆ ಎಂದಿಗಿAತ ದಪ್ಪಗಾಗತೊಡಗುವುದು, ಆಯಾಸ ಅಧಿಕವಾಗತೊಡಗಿದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಇಂತಹ ರೋಗ ಲಕ್ಷಣಗಳನ್ನು ಗಮನಿಸದೇ ಹೋದಲ್ಲಿ, ಕಾಯಿಲೆಯ ಬೆಳವಣಿಗೆ ಗಮನಕ್ಕೆ ಬಾರದೆ, ಪಿತ್ತ ಜನಕಾಂಗದ ಜೀವ ಕಣಗಳಿಗೆ ಹಾನಿಯಾಗತೊಡಗಿ, ಲಿವರ್ ಫೈಬ್ರೊಸಿಸ್, ಸಿರೋಸಿಸ್ಗೆ ಕಾರಣವಾಗಬಹುದು. ಫ್ಯಾಟಿ ಲಿವರ್ ಕಾಯಿಲೆಯ ೪ನೇ ಮತ್ತು ಅಂತಿಮ ಹಂತ ಗಂಭೀರವಾಗಿದ್ದು, ಪಿತ್ತ ಜನಕಾಂಗ ವೈಫಲ್ಯ ಅಥವಾ ಲಿವರ್ ಕ್ಯಾನ್ಸರ್ಗೆ ಕಾರಣವಾಗಬಹುದು. ಪಿತ್ತ ಜನಕಾಂಗದ ಕಸಿ ಮಾಡಿಸುವುದು ಅನಿವಾರ್ಯವಾಗಬಹುದು. ಯಕೃತ್ತಿನ ಗಾತ್ರ ಕುಗ್ಗಿ ಗಾಯ, ಗಡ್ಡೆಗಳಿಗೆ ಕಾರಣವಾಗಬಹುದು. ಸಿರೋಸಿಸ್ನಲ್ಲಿ ಗಾಯಗೊಂಡಿರುವ ಯಕೃತ್ತಿನ ಅಂಗವನ್ನು ಆರೋಗ್ಯಕರ ಅಂಗಾAಗದಿAದ ಬದಲಾಯಿಸಲಾಗುತ್ತದೆ.
ಹೆಚ್ಚಿನ ಕೊಲೆಸ್ಟಾçಲ್, ರಕ್ತದ ಒತ್ತಡ, ದೇಹದ ಅಧಿಕ ತೂಕ, ಬೊಜ್ಜು, ಕಡಿಮೆ ನಿದ್ರೆ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಕಾರಣವಾಗಬಲ್ಲದು. ಹೃದಯಾಘಾತ, ಹೃದಯ ಸ್ತಂಭನಕ್ಕೆ ಒಳಗಾದವರಲ್ಲಿಯೂ ಫ್ಯಾಟಿ ಲಿವರ್ ಪತ್ತೆಯಾಗಿದೆ ಎಂದು ಹೃದ್ರೋಗ ಚಿಕಿತ್ಸಾ ತಜ್ಞ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿ.ಎನ್. ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.
ಫ್ಯಾಟಿ ಲಿವರ್ನ ಆರಂಭಿಕ ಹಂತದಲ್ಲಿ ಆತಂಕ ಅನಗತ್ಯ. ಜೀವನ ಶೈಲಿ ಬದಲಿಸುವುದರೊಂದಿಗೆ ಈ ಸಮಸ್ಯೆ ನಿವಾರಿಸಬಹುದು. ಮೈ ತೂಕ ನಿಯಂತ್ರಿಸುವ, ಬೊಜ್ಜು ಕರಗಿಸುವ, ಮಧುಮೇಹ, ರಕ್ತದೊತ್ತಡಕ್ಕೆ ಸಿಲುಕದಿರುವ, ಕೊಲೆಸ್ಟಾçಲ್ ಹೆಚ್ಚಿಸಿಕೊಳ್ಳದಿರುವ ಕ್ರಮಗಳತ್ತ ಚಿತ್ತ ಕೇಂದ್ರೀಕರಿಸಬೇಕು. ನಡಿಗೆ, ವ್ಯಾಯಾಮ, ಜಿಮ್ನಲ್ಲಿ ಕಸರತ್ತು ಸೂಕ್ತ. ಲಿವರ್ನ ಆರೋಗ್ಯ ಕಾಪಾಡಲು ನಾರಿನಂಶವಿರುವ ಸೊಪ್ಪು, ತರಕಾರಿ, ಸೋಯಾ, ಬೀನ್ಸ್, ಅರಿಶಿನ, ಬೆಳ್ಳುಳ್ಳಿ ಮಿಶ್ರಿತ ಆಹಾರ ಸೇವನೆ ಒಳ್ಳೆಯದು. ಮೀನಿನಲ್ಲಿರುವ ಒಮೆಗಾ ೩ ಕೊಬ್ಬಿನಂಶ ಲಿವರ್ನ ಉರಿಯೂತ ಕಡಿಮೆ ಮಾಡಬಹುದು.
ಮದ್ಯಪಾನ, ಧೂಮಪಾನಕ್ಕೆ ಕಡಿವಾಣ, ಸಕ್ಕರೆ, ಸಿಹಿತಿಂಡಿ, ಉಪ್ಪಿನಂಶದ ಆಹಾರ ಸೇವನೆ ನಿಯಂತ್ರಣದ, ಕೊಬ್ಬಿನಂಶ ಅಧಿಕವಾಗಿರುವ ಮಾಂಸಹಾರ ಸೇವನೆಯಿಂದ ದೂರ ಉಳಿವುದು ಒಳಿತು. ನಿಯಮಿತ ಕಾಫಿ ಸೇವನೆ ಲಿವರ್ನ ಆರೋಗ್ಯಕ್ಕೆ ಸೂಕ್ತ. ಮೀನು, ಆಲೀವ್, ಬೆಣ್ಣೆಹಣ್ಣು, ನಟ್ಸ್, ಕೊಬ್ಬರಿ, ಅಗಸೆ ಬೀಜ ಸೇವಿಸಬಹುದು. ವ್ಯಾಯಾಮ ಮಾಡದಿರುವ, ಹೆಚ್ಚಿನ ಚಟುವಟಿಕೆ ನಿರ್ವಹಿಸದ ಸಂದರ್ಭಗಳಲ್ಲಿ ಅಧಿಕ ಪ್ರಮಾಣದ ಆಹಾರ ಸೇವನೆ ತರವಲ್ಲ. ಈ ಸಮಸ್ಯೆಗೆ ಸಿಲುಕಿರುವವರು ಫ್ಯಾಟಿ ಲಿವರ್ ನಿಯಂತ್ರಣಕ್ಕೆ ತಮ್ಮಿಷ್ಟದಂತೆ ಔಷಧಿ ಸೇವನೆ ಮಾಡಬಾರದು. ತಜ್ಞ ವೈದ್ಯರ ಅಭಿಪ್ರಾಯ ಪಡೆಯದೆ ಮನೆಮದ್ದಿನ ಸೇವನೆಗೆ ಮುಂದಾಗುವುದೂ ಕ್ಷೇಮವಲ್ಲ.
ಮಧುಮೇಹ, ಥೈರಾಯ್ಡ್, ಬೊಜ್ಜು ಮೊದಲಾದ ಸಮಸ್ಯೆ ಇರುವವರು ಆಹಾರ, ಜೀವನಶೈಲಿ ಬದಲಿಸಿ ಫ್ಯಾಟಿ ಲಿವರ್ನಿಂದ ಮುಕ್ತರಾಗಬಹುದು. ಇಂದು ವಿಶ್ವ ಪಿತ್ತ ಜನಕಾಂಗ ದಿನ. (Woಡಿಟಜ ಐiveಡಿ ಆಚಿಥಿ). ಲಿವರ್ಗೆ ಸಂಬAಧಿಸಿದAತೆ ಹೆಪಟೈಟಿಸಿ, ಫ್ಯಾಟಿ ಲಿವರ್, ಲಿವರ್ ಕ್ಯಾನ್ಸರ್ನಂತಹ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಿ ಪಿತ್ತ ಜನಕಾಂಗದ ಆರೋಗ್ಯಕ್ಕೆ ತೆಗೆದುಕೊಳ್ಳಬೇಕಾದ ಜಾಗೃತೆಯ ಅರಿವು ಮೂಡಿಸುವ ಸುಸಂದರ್ಭವಿದು. ಲಿವರ್ನ ಆರೋಗ್ಯ ರಕ್ಷಣೆಯೊಂದಿಗೆ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಕಟಿಬದ್ಧರಾಗೋಣ. (ಆಧಾರ)
- ಕಲ್ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.