ಮಡಿಕೇರಿ, ಏ. ೧೭: ವಿಶ್ವ ಕಲಾದಿನದಂದು ಆಕರ್ಷಣೀಯ ಕಲಾ ಪ್ರದರ್ಶನ ಏರ್ಪಡಿಸಿ ಕೊಡಗು ವಿದ್ಯಾಲಯವು ಕಲಾ ಜಾಗೃತಿ ಮೂಡಿಸಿತು.

ಜಿಲ್ಲೆಯ ಏಳು ಉತ್ತಮ ಕಲಾವಿದರು ಸ್ಥಳದಲ್ಲೇ ರಚಿಸಿದ ವಿವಿಧ ಚಿತ್ರಗಳು, ಮರ ಹಾಗೂ ಕಲ್ಲಿನ ಕೆತ್ತನೆ ಏಪ್ರಿಲ್ ಒಂದರಿAದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾರ್ಥಿ ಗಳು, ಪೋಷಕರು ಮತ್ತು ಕಲಾಪ್ರಿಯರ ಗಮನ ಸೆಳೆದವು.

ಸುಂದರ ಕಲಾಪ್ರದರ್ಶನ ಉದ್ಘಾಟಿಸಿ, ಮುಖ್ಯ ಅತಿಥಿಯಾಗಿ ಮಾತನಾಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಉತ್ತಮ ಕಲಾವಿದ ನಾಗಲು ಆಸಕ್ತಿ, ಅಭ್ಯಾಸ, ಏಕಾಗ್ರತೆ ಹಾಗೂ ತಿಳಿಯಾದ ಮನಸ್ಸು ಅಗತ್ಯ ಎಂದರು.

ಮೋನಲೀಸಾ ಕೃತಿ ರಚಿಸಲು ಆಕೆಯ ಪತಿ ಲಿಯೋನಾರ್ಡೊ ಡಾ. ವಿಂನ್ಸಿ ೧೪ ವರ್ಷ ತೆಗೆದುಕೊಂಡಿದ್ದ ಎಂಬ ಅಂಶ ತಿಳಿಸಿದ ಅವರು, ಆ ಕೃತಿ ಕಳ್ಳತನವಾಗಿ ಅಪರಾಧಿ ಸ್ಥಾನದಲ್ಲಿ ಹೆಸರಾಂತ ಮತ್ತೊಬ್ಬ ಕಲಾವಿದ ಬಂಧಿಸಲ್ಪಟ್ಟಿದ್ದ ಎಂಬ ಸತ್ಯ ಹೊರಗೆಡ ವಿದರು. ಜನರ ಮೌಢ್ಯ ಅಥವಾ ಮೋನಾಲೀಸಾ ಕಲೆಯ ಮೋಡಿ ಎಷ್ಟಿತ್ತೆಂದರೆ, ಇಂದಿಗೂ ಆಕೆಯ ಹೆಸರಿಗೆ ಪ್ರೇಮ ಪತ್ರ ಬರೆಯುವವರಿ ದ್ದಾರೆ. ಆಕೆಯ ಹೆಸರಿನಲ್ಲಿ ಅಂಚೆ ಪೆಟ್ಟಿಗೆಯೇ ಇದೆ ಎಂಬ ಸ್ವಾರಸ್ಯ ವಿಚಾರ ಹಂಚಿಕೊAಡರು.

ಕಲಾವಿದರಾಗಲು ಬೆಲೆಬಾಳುವ ಬಣ್ಣ, ಬ್ರಷ್ ಇತ್ಯಾದಿ ಇದ್ದರೆ ಮಾತ್ರ ಸಾಧ್ಯ ಎಂಬ ನಂಬಿಕೆ ಸುಳ್ಳು ಎಂದ ಅವರು, ದನದ ಕೊಟ್ಟಿಗೆಯಲ್ಲಿ, ಗೋಡೆಯ ಮೇಲೆ ಸಗಣಿ ಬಳಸಿ ಚಿತ್ರ ಬಿಡಿಸುತ್ತಿದ್ಸ ಅವರ ಸಹೋದರಿ, ಚಾಲಕರಾಗಿದ್ದಾಗ ಕಾಮೆಯಂಡ ಮುತ್ತಣ್ಣ ಎಂಬವರು ಸೋಪಿನಲ್ಲಿ ಉಗುರು ಬಳಸಿ ರಚಿಸುತ್ತಿದ್ದ ಪುಟ್ಟ ಕೆತ್ತನೆ ಬಳಿಕ ಮರ ಹಾಗೂ ಕಲ್ಲಿನ ಕೆತ್ತನೆಯಲ್ಲಿ ಅವರು ಹೆಸರು ಮಾಡಿದ ಯಶೋಗಾಥೆಯನ್ನು ವಿವರಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಲಾಸಕ್ತಿ ಜೀವನವನ್ನು ಹಸನುಗೊಳಿಸುತ್ತದೆ ಎಂದರು.

ಕಲಾವಿದರುಗಳಾದ ಟಿ.ಬಿ. ಪ್ರಸನ್ನ ಕುಮಾರ್, ಐಮಂಡ ರೂಪೇಶ್ ನಾಣಯ್ಯ, ರಾಮ್ ಗೌತಮ್, ಅರುಣಾ ರಾಮ್, ವಹೀದ್ ಜಾನ್, ಮಂಜುನಾಥ್ ಅವರುಗಳು ತಯಾರಿಸಿದ ಕೃತಿಗಳು ಪ್ರದರ್ಶಿ ಸಲ್ಪಟ್ಟವು. ಕಲಾವಿದರ ಪರವಾಗಿ ವಹೀದ್ ಜಾನ್ ಮಾತನಾಡಿದರು.

ಪ್ರಾಂಶುಪಾಲೆ ಸುಮಿತ್ರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆಯ ಹಿಂದಿನ ಶ್ರಮ ಹಾಗೂ ಅದು ನೀಡುವ ಆನಂದದ ಕುರಿತು ಮಾತನಾಡಿದರು. ಕಲಾವಿದರ ಕೃತಿಗಳನ್ನು ಪ್ರಶಂಸಿಸಿದರು. ಶಾಲಾ ಸಮಿತಿ ಸದಸ್ಯ ಸಿ.ಎಸ್. ಗುರುದತ್, ಆಡಳಿತ ನಿರ್ವಹಣಾ ಅಧಿಕಾರಿ ರವಿ ಪಿ. ಹಾಜರಿದ್ದರು.