ಭಾಗಮAಡಲ, ಏ. ೧೬: ಚೆಟ್ಟಿಮಾನಿಯ ಕುಂದಚೇರಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ಕ್ರಿಕೆಟ್ ಭಾನುವಾರದ ಪಂದ್ಯಗಳಲ್ಲಿ ಶೇರಮರಕಡ, ಬೊಳ್ತಜ್ಜಿರ ಹಾಗೂ ದೇವಾಯಿರ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.
ಬೊಳ್ತಜ್ಜಿರ ಮತ್ತು ಕೈಬಿಲಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊಳ್ತಜ್ಜಿರ ತಂಡ ೪೯ ರನ್ ಗಳಿಸಿತು. ಕೈಬಿಲಿ ತಂಡ ೬ ವಿಕೆಟ್‌ಗೆ ೪೫ ರನ್ ಗಳಿಸಿ ನಾಲ್ಕು ರನ್‌ಗಳ ಸೋಲನ್ನು ಕಂಡಿತು. ಕೊಳಂಬೆ ಮತ್ತು ಕಾವೇರಿ ಮನೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಳಂಬೆ ತಂಡ ನಾಲ್ಕು ವಿಕೆಟ್‌ಗೆ ೭೪ ರನ್ ಗಳಿಸಿತು. ಕಾವೇರಿಮನೆ ತಂಡ ೬ ವಿಕೆಟ್ ನಷ್ಟಕ್ಕೆ ೩೪ ರನ್ ಗಳಿಸಿ ೪೦ ರನ್‌ಗಳ ಸೋಲನ್ನು ಅನುಭವಿಸಿತು. ಕೋಳಿಮಾಡು ಮತ್ತು ಪಟ್ಟಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೋಳಿಮಾಡು ತಂಡ ಎರಡು ವಿಕೆಟ್‌ಗೆ ೪೮ ರನ್ ಗಳಿಸಿತು. ಪಟ್ಟಡ ತಂಡ ೩ ವಿಕೆಟ್‌ಗೆ ೪೭ ರನ್ ಮಾಡಿ ಒಂದು ರನ್‌ಗಳ ಸೋಲನ್ನು ಕಂಡಿತು. ದೇವಾಯಿರ ಮತ್ತು ಬಾಕಿಲನ ತಂಡಗಳ ನಡುವಿನ ಪಂದ್ಯದಲ್ಲಿ ದೇವಾಯಿರ ಐದು ವಿಕೆಟ್ ನಷ್ಟಕ್ಕೆ ೭೫ ರನ್ ಗಳಿಸಿತು. ಬಾಕಿಲನ ಆರು ವಿಕೆಟ್ ನಷ್ಟಕ್ಕೆ ೫೮ ರನ್ ಮಾಡಿ ೧೭ ರನ್ ಸೋಲನ್ನು ಅನುಭವಿಸಿತು. ಕೊಳಂಬೆ ಮತ್ತು ಬೊಳ್ತಜ್ಜಿರ ತಂಡಗಳ ನಡುವಿನ ಪಂದ್ಯದಲ್ಲಿ ಕೊಳಂಬೆ ಆರು ವಿಕೆಟ್‌ಗೆ ೪೪ ರನ್ ಗಳಿಸಿತು. ಬೊಳ್ತಜ್ಜಿರ ೫.೩ ಓವರ್‌ನಲ್ಲಿ ೪೫ ರನ್ ಮಾಡಿ ಏಳು ವಿಕೆಟ್‌ಗಳ ಜಯಗಳಿಸಿತು ಕೋಳಿಮಾಡು ಮತ್ತು ದೇವಾಯಿರ ತಂಡಗಳ ನಡುವಿನ ಪಂದ್ಯದಲ್ಲಿ ಕೋಳಿಮಾಡು ತಂಡ ಏಳು ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿತು. ದೇವಾಯಿರ ತಂಡ ಎರಡು ವಿಕೆಟ್ ನಷ್ಟಕ್ಕೆ ೬೮ ರನ್ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಶೇರಮರಕಡ ತಂಡವು ಸೆಟ್ಟೆಜನ ವಿರುದ್ಧ ೮೦ ರನ್ ಗಳಿಸಿತು. ಸೆಟ್ಟೆಜನ ಐದು ವಿಕೆಟ್ ನಷ್ಟಕ್ಕೆ ೪೫ ರನ್‌ಗಳಿಸಿ ಸೋಲನ್ನು ಅನುಭವಿಸಿತು. ಶೇರಮರಕಡ ಹಾಗೂ ಅಮೆಮನೆ ತಂಡದ ನಡುವಿನ ಪಂದ್ಯದಲ್ಲಿ ಶೇರಮರಕಡ ೩ ವಿಕೆಟ್‌ಗೆ ೮೨ ರನ್ ಮಾಡಿದರೆ, ಅಮೆಮನೆ ತಂಡ ಏಳು ವಿಕೆಟ್ ನಷ್ಟಕ್ಕೆ ೪೨ ರನ್‌ಗಳಿಸಿ ಸೋಲನ್ನು ಅನುಭವಿಸಿತು.
-ಸುನಿಲ್