ಮಡಿಕೇರಿ, ಏ. ೧೬: ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ನಗರದ ರಾಜಾಸೀಟ್‌ನಲ್ಲಿ ಶನಿವಾರ ಆಯೋಜಿಸಲ್ಪಟ್ಟಿದ್ದ ಕೊಡಗು ಮತ್ತು ಮತದಾನ ವಿಷಯ ಸಂಬAಧಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ : ೧೪ ವರ್ಷದೊಳಗಿನ ವಿಭಾಗ -ಹರ್ಷಿತ ಪೊನ್ನಪ್ಪ, ಸಂತಜೋಸೇಫರ ಶಾಲೆ ಮಡಿಕೇರಿ (ಪ್ರಥಮ), ಧ್ರುವನಂಜಪ್ಪ, ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ, (ದ್ವಿತೀಯ), ಧೃತಿ ಕೆ.ಯು., ಸಂತಜೊಸೇಫರ ಶಾಲೆ. ಮಡಿಕೇರಿ, (ತೃತೀಯ) ವಿಸ್ಮಯಿ ಎಂ. ಮೊರಾರ್ಜಿ ದೇಸಾಯಿ ವಸತಿಶಾಲೆ, ಕೂಡಿಗೆ (ಸಮಾಧಾನಕರ)
೧೪ ರಿಂದ ೧೮ ವರ್ಷದೊಳಗಿನ ವಿಭಾಗ - ಮೋಕ್ಷಾ ಎ.ಕೆ. ಕಾವೇರಿ ವಿದ್ಯಾಸಂಸ್ಥೆ. ವೀರಾಜಪೇಟೆ (ಪ್ರಥಮ) ತಶ್ಮಿಕಾ ಕೆ.ಎಂ. ಸರ್ಕಾರಿ ಪ್ರೌಢಶಾಲೆ ಮೂರ್ನಾಡು (ದ್ವಿತೀಯ), ಮೋಕ್ಷಿತಾ ಕೆ.ಜೆ. ನವೋದಯ ಶಾಲೆ ಗಾಳಿಬೀಡು (ತೃತೀಯ), ಕುನಾಲ್ ದೇವಯ್ಯ ಸಿ.ಸಿ. ರಾಮಕೃಷ್ಣ ವಿದ್ಯಾಕೇಂದ್ರ ಮೈಸೂರು (ಸಮಾಧಾನಕರ)
೧೮ ವರ್ಷ ಮೇಲ್ಪಟ್ಟವರ ವಿಭಾಗ - ಸ್ವಾಮಿನಾಥ್ ಆರ್. ಮಡಿಕೇರಿ (ಪ್ರಥಮ), ಬಿ.ಟಿ.ದೇಚಮ್ಮ ಮೂರ್ನಾಡು ಕಾಲೇಜು (ದ್ವಿತೀಯ), ಚೈತ್ರಾ ಬಿ.ಎಸ್. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು (ತೃತೀಯ) ಮಾಧುರ್ಯ ಮಂಗಳೂರು (ಸಮಾಧಾನಕರ).