ಚೆಟ್ಟಳ್ಳಿ, ಏ. ೧೬: ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ) ಭಗವತಿ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಪಟ್ಟಣಿ ಹಬ್ಬದಂದು ಮಧ್ಯಾಹ್ನ ೨ ಗಂಟೆಗೆ ಊರಿನವರ ಸಮ್ಮುಖದಲ್ಲಿ ದುಡಿಕೊಟ್ಟು ಹಾಡಿನೊಂದಿಗೆ ದೇವಾಲಯ ತಕ್ಕರಾದ ಮುಳ್ಳಂಡ ಐನ್ ಮನೆಯಿಂದ ಎತ್ತುಪೋರಾಟ ದೊಂದಿಗೆ ದೇವರ ಭಂಡಾರವನ್ನು ತಂದು ದೇವಿಗೆ ವಿಶೇಷ ಪೂಜೆ ನೆರವೇರಿತು.

ದೊಡ್ದಹಬ್ಬದಂದು ದೇವರ ಭಂಡಾರವನ್ನು ದೇವಾಲಯಕ್ಕೆ ತರುವುದು, ವಿಶೇಷ ಪೂಜೆ, ತೆಂಗಿನಕಾಯಿ ಎಳೆಯುವುದು, ತೆಂಗಿನಕಾಯಿಗೆ ಗುಂಡು ತರುವುದು, ವಿಶೇಷ ಪೂಜೆ, ತೆಂಗಿನಕಾಯಿ ಎಳೆಯುವುದು, ತೆಂಗಿನಕಾಯಿಗೆ ಗುಂಡು ನಂತರ ದೇವರ ನೆಲೆಯಲ್ಲಿ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಿಸಿದರು. ಪ್ರಸಾದ ವಿತರಣೆ ನೆರವೇರಿತು.