ಪೊನ್ನಂಪೇಟೆ, ಏ. ೧೬: ವಿಧಾನ ಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕಿನ ನಿಟ್ಟೂರು -ಕಾರ್ಮಾಡು ಚೆಕ್ಪೋಸ್ಟ್ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭ ಅಕ್ರಮವಾಗಿ ಸಾಗಿಸುತ್ತಿದ್ದ ೧೦ ಗ್ರಾಂ ಚರಸ್ ಹಾಗೂ ೩೫ ಗ್ರಾಂ ಗಾಂಜಾವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಮಾಡು ಚೆಕ್ಪೋಸ್ಟ್ನಲ್ಲಿ ಅಬಕಾರಿ ಇಲಾಖೆ, ಎಸ್ಎಸ್ಟಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಹೆಚ್.ಡಿ.ಕೋಟೆ ಕಡೆಯಿಂದ ಬರುತಿದ್ದ ಕಾರನ್ನು (ಎ.ಪಿ.೩೯, ಎಲ್.ಕ್ಯೂ.೨೩೩೦) ತಡೆದು ತಪಾಸಣೆಗೊಳಪಡಿಸಿದಾಗ ಮಾದಕ ವಸ್ತು ಇರುವ ಬಗ್ಗೆ ಗೊತ್ತಾಗಿದೆ. ಕಾರಿನಲ್ಲಿದ್ದ ತಮಘ್ನ ಸರ್ಕಾರ್, ಬೀಬವ್ ಸಿಂಗ್, ದೇವಾಂಸ್ ಶರ್ಮಾ, ಆದಿತ್ಯ ಕುಮಾರ್ ಎಂಬವರು ಮಾದಕ ವಸ್ತು ಸಾಗಾಟ ಹಾಗೂ ಸೇವನೆ ಮಾಡಿರುವುದು ಕಂಡು ಬಂದಿದ್ದು, ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಉಪ ವಿಭಾಗ ಕಚೆೆÃರಿಯ ಅಬಕಾರಿ ಉಪ ಅಧೀಕ್ಷಕರಾದ ಎಂ.ಎನ್. ನಟರಾಜು ಹಾಗೂ ಸಹ ಸಿಬ್ಬಂದಿ ಎನ್.ಜಿ.ಮದನ್ ಕುಮಾರ್, ಅಬಕಾರಿ ಕಾನ್ಸ್ಟೇಬಲ್ ಸಂತೋಷ್, ವಾಹನ ಚಾಲಕ ದರ್ಶನ್, ಪೊಲೀಸ್ ಸಿಬ್ಬಂದಿ ಸಂತೋಷ್ ಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿ ಉದಯ್ ಕುಮಾರ್ ಹಾಗೂ ಗೇಟ್ ವಾಚರ್ ಪಾಲ್ಗೊಂಡಿದ್ದರು.
-ಚನ್ನನಾಯಕ