ಮಡಿಕೇರಿ, ಏ. ೧೫: ‘ಕೊಡಗು ಫಾರ್ ಟುಮಾರೊ' ‘ಸಂಘಟನೆಯ ರೀಬಿಲ್ಡ್ ಕೊಡಗು - ಪ್ರಾಜೆಕ್ಟ್ ವಣಚಲ್’ ಪರಿಕಲ್ಪನೆಯಲ್ಲಿ ದಾನಿಗಳಾದ ‘ಜ್ಯುವೆಲರ್ಸ್ ಅಸೋಸಿಯೇಷನ್ ಬೆಂಗಳೂರು' ಅವರಿಂದ ನಿರ್ಮಾಣಗೊಂಡ ವಣಚಲ್ ಸಮುದಾಯ ಸಭಾಂಗಣ ಅಥವಾ 'moಟಿsooಟಿ sheಟಣeಡಿ' - ಸಂತ್ರಸ್ತರ ಆಶ್ರಯ ತಾಣವನ್ನು ಇಂದು ಉದ್ಘಾಟಿಸಿ ಗಾಳಿಬೀಡು ಪಂಚಾಯಿತಿಗೆ ಹಸ್ತಾಂತರಿಸಲಾಯಿತು.
೨೦೧೮ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿನ ನಿವಾಸಿಗಳ ಪುನಶ್ಚೇತನಕ್ಕಾಗಿ ‘ಕೊಡಗು ಫಾರ್ ಟುಮಾರೊ’ ಸಂಘಟನೆ ಶ್ರಮಿಸುತ್ತಿದೆ. ವಣಚಲು ಗ್ರಾಮವೂ ಅತಿವೃಷ್ಟಿಯಿಂದ ತತ್ತರಿಸಿದ್ದು, ಅಲ್ಲಿನ ನಿವಾಸಿಗಳು ಅಂದು ಪರಿತಪಿಸುವಂತಾಗಿತ್ತು.
ಮಳೆಗಾಲ ಸಂದರ್ಭ ಜಿಲ್ಲಾಡಳಿತ ತೆರೆಯುವ ಸಂತ್ರಸ್ತ ಕೇಂದ್ರವು ದೂರದ ಮಡಿಕೇರಿಯಲ್ಲಿರುವ ಕಾರಣ ವಣಚಲಿನಿಂದ ಮಡಿಕೇರಿಗೆ ತೆರಳಲು ಕಷ್ಟಕರವಾಗುತ್ತದೆ. ಇದನ್ನು ಮನದಲ್ಲಿಟ್ಟು ‘ಕೊಡಗು ಫಾರ್ ಟುಮಾರೊ’ ಸಂಘಟನೆ ಗ್ರಾಮ ದಲ್ಲಿಯೇ ಕೇಂದ್ರ ತೆರೆದು ಅತಿವೃಷ್ಟಿ ಸಂದರ್ಭ ಸ್ಥಳೀಯ ನಿವಾಸಿಗಳು ಈ ಕೇಂದ್ರವನ್ನೇ ಉಪಯೋಗಿ ಸಬಹುದಾದ ಪರಿಕಲ್ಪನೆ ಹೊಂದಿದ್ದು ದಾನಿಗಳ ಮೂಲಕ ಸಮುದಾಯ ಭವನವೊಂದನ್ನು ನಿರ್ಮಿಸಲು ಉದ್ದೇಶಿಸಿತ್ತು. ಅದರ ಅಂಗವಾಗಿ ಗ್ರಾಮೀಣ ಪ್ರದೇಶವಾಗಿ ರುವ ವಣಚಲಿನಲ್ಲಿ ವಿವಿಧ ಕಾರ್ಯಕ್ರಮ ಗಳಿಗೆ ಸಭಾಂಗಣ ಹಾಗೂ ಇದರೊಂದಿಗೆ ಅತಿವೃಷ್ಟಿ ಸಂದರ್ಭ ಅತ್ಯಗತ್ಯವಿರುವ ಸಂತ್ರಸ್ತ ಕೇಂದ್ರ ವಾಗಿಯೂ ಉಪಯೋಗಿ ಸಲ್ಪಡಬಹುದಾದ ರೂ. ೨೦ ಲಕ್ಷ ವೆಚ್ಚದ ಸಭಾಂಗಣವನ್ನು ಇಂದು ಉದ್ಘಾಟನೆಗೊಳಿಸಲಾಯಿತು. ನಂತರ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ, ‘ಕೊಡಗು ಫಾರ್ ಟುಮಾರೊ’ ಸಂಯೋಜಕ ಕಾವೇರಿಯಪ್ಪ ಪಿ.ಸಿ, ದಾನಿಗಳಾದ ‘ದಿ ಜ್ಯುವೆಲರ್ಸ್ ಅಸೋಸಿಯೇಷನ್ ಬೆಂಗಳೂರು’ ಸಂಸ್ಥೆಯ ಅಧ್ಯಕ್ಷ ಸುರೇಶ ಗನ್ನ, ಮಾಜಿ ಅಧ್ಯಕ್ಷ ಸಾಗರ್ ಎನ್.ವಿ., ಉಪಾಧ್ಯಕ್ಷ ಚೇತನ್ ಮೆಹ್ತ, ನಿರ್ದೇಶಕ ಹಾಗೂ ಯೋಜನಾಧಿಕಾರಿ ಶ್ರೀನಿವಾಸ್ ಆರ್, ಕ್ಯಾಟ್ ಕೊಡಗು ಸಿ.ಇ.ಒ ಪಂತ್ ಮೊಣ್ಣಪ್ಪ, ‘ಕೊಡಗು ಫಾರ್ ಟುಮಾರೊ’ ಸರ್ವ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು. ಗಾಳಿಬೀಡು ಪಂಚಾಯಿತಿ ಪ್ರತಿನಿಧಿಗಳಾಗಿ ಪಿ.ಡಿ.ಓ. ಶಶಿಕಿರಣ್, ಬಿಲ್ಕಲೆಕ್ಟರ್ ಮನು ಹಾಗೂ ಇತರರು ಇದ್ದರು.