ಸುಂಟಿಕೊಪ್ಪ, ಏ. ೧೫: ಸುಂಟಿಕೊಪ್ಪ ಸಿ.ಎಸ್.ಐ. ಸಭೆಯ ವತಿಯಿಂದ ನೂತನ ದೇವಾಲಯ ಕಟ್ಟಡದ ಪ್ರತಿಷ್ಠಾಪನೆ ಹಾಗೂ ದೃಢೀಕರಣ ಸಂಸ್ಕಾರವು ಶುಕ್ರವಾರ ವಿಶೇಷ ಪ್ರಾರ್ಥನೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ಶುಕ್ರವಾರದಂದು ನೂತನವಾಗಿ ಸಿ.ಎಸ್.ಐ. ಸಭೆಯ ವತಿಯಿಂದ ಇಮ್ಯಾನೂವೆಲ್ ನೂತನ ದೇವಾಲಯದ ಲೋಕಾರ್ಪಣೆ ವಿಧಿ ವಿಧಾನಗಳ ಸಂದರ್ಭ ದೇವರ ವಾಕ್ಯದ ಸಂದೇಶವನ್ನು ಸಿ.ಐ.ಎಸ್., ಕೆ.ಎಸ್.ಡಿ. ಬಿಷೋಪ್ ರೈಟ್. ರೆವ್. ಹೇಮಚಂದ್ರಕುಮಾರ್ ವಲಯದ ವಿವಿಧ ಭಾಗಗಳಿಂದ ಸಭಾಪಾಲಕರುಗಳು ಆಶೀರ್ವಚನಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಎಸ್ಐ ಸಭೆಯ ಪದಾಧಿಕಾರಿಗಳು, ಮಂಗಳೂರು, ಉಡುಪಿ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ವಲಯದ ಅಧ್ಯಕ್ಷರುಗಳು, ಸಭೆಯಲ್ಲಿ ಸೇವೆ ಸಲ್ಲಿಸಿದ್ದ ಸಭಾಪಾಲಕರು ಹಾಗೂ ಸಭಾಪಾಲಕ ರೆವ್. ಅಮೃತರಾಜ್, ಸಭಾಸೇವಕರಾದ ಸಂಧ್ಯಾ ಸುಪ್ರೀತಾ ಪಾಲ್ಗೊಂಡಿದ್ದರು.