ಗೋಣಿಕೊಪ್ಪ ವರದಿ, ಏ. ೧೪: ಎಡಮ್ಯಾರ್ ಒಂದ್ ಆಚರಣೆ ಮೂಲಕ ಸರ್ಕಾರಕ್ಕೆ ಕೊಡವರಿಗೆ ಪ್ರತ್ಯೇಕ ಪಂಚಾAಗ ಇದೆ ಎಂಬುವುದನ್ನು ಅರ್ಥೈಸಿದ್ದೇವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ಯು ನಾಚಪ್ಪ ಹೇಳಿದರು.
ಎಡಮ್ಯಾರ್ ಒಂದ್ ಆಚರಣೆ ಹಿನ್ನೆಲೆ ಶುಕ್ರವಾರ ಆರ್ಎಂಸಿ ಆವರಣದಿಂದ ಗೋಣಿಕೊಪ್ಪ ಬಸ್ ನಿಲ್ದಾಣದವರೆಗೆ ಆಯೋಜಿಸಿದ್ದ ಪೊಂಬೊಳಕ್ ಕಾರ್ಯಕ್ರಮದಲ್ಲಿ ಮಾತನಾಡಿದರು.
೨೯ ವರ್ಷಗಳಿಂದ ಎಡಮ್ಯಾರ್ ಒಂದ್ ಪೊಂಬೊಳಕ್ ಮೂಲಕ ಸರ್ಕಾರಕ್ಕೆ ಕೊಡವರ ಪ್ರತ್ಯೇಕ ಪಂಚಾAಗವನ್ನು ತಿಳಿಸುವ ಕಾರ್ಯ ನಡೆಸಲಾಗುತ್ತದೆ. ಇದು ಸರ್ಕಾರದ ಅರಿವಿಗೂ ಬಂದಿದೆ. ಕೊಡವರ ಹಬ್ಬ ಆಚರಣೆಗೆ ಒತ್ತು ನೀಡಬೇಕು. ಕೊಡವ ಕ್ಯಾಲೆಂಡರ್ನಲ್ಲಿ ಆಚರಣೆಯಿಂದ ಮಾತ್ರ ಮೂಲ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಕೊಡವರು ಒಂದಾಗುವ ಮೂಲಕ ಜನಾಂಗಕ್ಕೆ ಶಕ್ತಿ ತುಂಬುವ ಕಾರ್ಯ ನಡೆಯಬೇಕಿದೆ ಎಂದರು.
ಅಖAಡ ದೇಶಪ್ರೇಮಿ ಸಮುದಾಯವಾಗಿರುವ ಕೊಡವರಿಗೆ ವಿಶ್ವದಲ್ಲಿ ಸ್ಪಷ್ಟ ದಾಖಲೆ, ಗುರುತು ಸರ್ಕಾರದ ಮಟ್ಟದಲ್ಲಿ ಇಲ್ಲದಂತಾಗಿದೆ. ಇದಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಕೊಡಗಿನ ಸಂಪನ್ಮೂಲಕ್ಕಾಗಿ ರಾಜಕಾರಣಿಗಳಿಗೆ ಕೊಡಗಿನ ಮೇಲೆ ಮಾತ್ರ ಆಸಕ್ತಿ ಇದೆ. ಕೊಡವರ ಮೇಲೆ ಇಲ್ಲ. ಕೊಡವ ಕಲೆ, ಸಂಸ್ಕೃತಿಯನ್ನು ಮಾರುಕಟ್ಟೆ ಆಧಾರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ನಮ್ಮ ಉಳಿವಿಗೆ ಶಾಶ್ವತ ಪರಿಹಾರಕ್ಕಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಹೋರಾಡುತ್ತಿದೆ. ದೇಶದದಲ್ಲಿ ನಾನಾ ಜನಾಂಗವಿದ್ದರೂ, ಸಣ್ಣ ಸಮುದಾಯಕ್ಕೂ ಸಾಂವಿಧಾನಿಕ ಭದ್ರತೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಬಸ್ ನಿಲ್ದಾಣದವರೆಗೆ ಸುಮಾರು ನೂರಕ್ಕೂ ಹೆಚ್ಚು ಕಾರ್ಯಕರ್ತರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು.