ನಾಪೋಕ್ಲು, ಏ. ೧೪: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಜಿಲ್ಲೆಯ ೨೮೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ೧೦ನೇ ತರಗತಿಯಲ್ಲಿ ಫರಿದಾ ಕುಂಜಿಲ ಪ್ರಥಮ ಸ್ಥಾನ ನಾಪೋಕ್ಲುವಿನ ಝಿಝಾ ಜೈನಬ ಅಮ್ಮತ್ತಿಯ ಅಜ್ನಾಸ್ ಮಹಮ್ಮದ್ ಕ್ರಮವಾಗಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
೧೨ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಪಾಲಿಬೆಟ್ಟ ಮದರಸದ ವಿದ್ಯಾರ್ಥಿಗಳಾದ ಇರ್ಫಾನ ಮತ್ತು ರಿಜ್ವಾನ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರೆ ಪಾರಿಜಾ ಆಜಾದ್ ನಗರ ದ್ವಿತೀಯ ಸ್ಥಾನವನ್ನು ಪಡೆದರು.
೭ನೇ ತರಗತಿಯಲ್ಲಿ ರಿಶಾನ ಪಾಲಿಬೆಟ್ಟ ಹಾಗೂ ಫಾತಿಮಾ ಆಜಾದ್ ನಗರ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಮೂರ್ನಾಡಿನ ಹಬೀಬ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ೫ನೇ ತರಗತಿಯಲ್ಲಿ ೭ನೇ ಹೊಸಕೋಟೆಯ ಇಝಾನ್ ಫೆಬಿನ್ ಪ್ರಥಮ ಸ್ಥಾನವನ್ನು ಪಡೆದರೆ ಮೊಹಮ್ಮದ್ ಆಶಿಕ್ ಕೊಂಡAಗೇರಿ ಹಾಗೂ ಮಾಪಿಳ್ಳೆ ತೋಡಿನ ರೈಹಾನ ಕ್ರಮವಾಗಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.