ಮಡಿಕೇರಿ, ಏ. ೧೪ : ದೇವರ ದರ್ಶನಕ್ಕೆಂದು ಭಕ್ತಿ ಭಾವದಿಂದ ಹೊರಟಿದ್ದ ಸಂಸಾರ ಅಪಘಾತದಲ್ಲಿ ದುರ್ಮರಣ ಹೊಂದಿ ಸ್ಮಶಾನ ಸೇರಿದ ದಾರುಣ ಘಟನೆ ಸಂಭವಿಸಿದೆ. ಕೊಡಗಿನ ಗಡಿಭಾಗ ಸಂಪಾಜೆ ರಾಷ್ಟಿçÃಯ ಹೆದ್ದಾರಿಯಲ್ಲಿ ಸರಕಾರಿ ಸಾರಿಗೆ ಬಸ್ ಮತ್ತು ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ತಿಂಗಳ ಕೂಸು, ಮೂರು ವರ್ಷದ ಹೆಣ್ಣು ಮಗು ಹಾಗೂ ಮಕ್ಕಳು, ಮಹಿಳೆಯರು ಸೇರಿದಂತೆ ಆರು ಮಂದಿ ದುರ್ಮರಣ ಹೊಂದಿದ್ದು, ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು (ಕೆಎ ೦೧ ಎಹೆಚ್ ೩೮೯೮) ಮತ್ತು ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಬಸ್ ನಡುವೆ ಸಂಪಾಜೆಯ ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿದೆ. ಕಾರು ನೇರವಾಗಿ ಬಸ್‌ನ ಬಲಭಾಗಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಶೇ. ೮೦ರಷ್ಟು ಭಾಗ ಬಸ್‌ನ ಕೆಳಭಾಗಕ್ಕೆ ನುಗ್ಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿ ರಸ್ತೆಯಿಂದ ಹೊರಕ್ಕೆ ಹಿಮ್ಮುಖವಾಗಿ ಚಲಿಸಿ ತಿರುಗಿ ನಿಂತಿದೆ. ಕಾರಿನಲ್ಲಿ ಎಂಟು ಮಂದಿ ಪ್ರಯಾಣಿಸುತ್ತಿದ್ದು, ಮೂವರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಚಾಲಕ ಸಾವನ್ನಪ್ಪಿದ್ದಾರೆ. ಆರು ವರ್ಷದ ಓರ್ವ ಬಾಲಕ ಹಾಗೂ ಓರ್ವ ಪುರುಷ ಗಂಭೀರ ಗಾಯ ಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಾರ (೩೫), ಶಿಲ್ಪ (೨೯), ಯಶಸ್ ಗೌಡ (೮), ನಿಶಿಕಾ (೮ ತಿಂಗಳು), ಪ್ರಿಯಾಂಕ (೩೫), ಮನುಶ್ರೀ (೩) ಎಂಬವರುಗಳೇ ದುರ್ಮರಣ ಕ್ಕೀಡಾದವರು.

ಸುಬ್ರಹ್ಮಣ್ಯ ದರ್ಶನಕ್ಕೆ ಹೊರಟಿದ್ದರು

ಮೂಲತಃ ಮಂಡ್ಯ ಜಿಲ್ಲೆಯ ಮಂಡ್ಯ ಹಾಗೂ ಮಳವಳ್ಳಿಯ ಎರಡು ಸಂಸಾರದವರು ಕುಮಾರ ಅವರ ಕಾರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಇನ್ನಿತರ ಪುಣ್ಯ ಕ್ಷೇತ್ರಗಳಿಗೆ ದೇವರ ದರ್ಶನಕ್ಕೆಂದು ಹೊರಟಿದ್ದರು. ಬೆಳಿಗ್ಗೆ ಮಂಡ್ಯದಿAದ ಹೊರಟು ಸಂಪಾಜೆ ತಲಪುವಷ್ಟರಲ್ಲಿ ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ನೇರವಾಗಿ ಬಸ್‌ನ ಮುಂಭಾಗಕ್ಕೆ ಡಿಕ್ಕಿಯಾಗಿದೆ.

(ಮೊದಲ ಪುಟದಿಂದ)

ಓರ್ವ ಸ್ಥಳದಲ್ಲಿ, ಐವರು ಮಾರ್ಗ ಮಧ್ಯ ಸಾವು

ಕಾರು ಡಿಕ್ಕಿಯಾದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ಬದಿಯಲ್ಲಿರುವ ಪೆಟ್ರೋಲ್ ಬಂಕ್ ಎದುರಿಗೆ ಬಂದು ತಿರುಗಿ ನಿಂತಿದೆ. ಕಾರು ಚಾಲಕ ಕುಮಾರ ಸ್ಥಳದಲ್ಲೇ ಅಸುನೀಗಿದರೆ, ಉಳಿದವರನ್ನು ಸಂಪಾಜೆ ಉಪಠಾಣಾ ಸಹಾಯಕ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು, ಸ್ಥಳೀಯರು, ಹಾಗೂ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದವರು ಹಗ್ಗ, ಕಬ್ಬಿಣದ ಸಲಾಕೆಗಳನ್ನು ಬಳಸಿ ಜಖಂಗೊAಡಿದ್ದ ಕಾರಿನೊಳಗಿನಿಂದ ಹೊರತೆಗೆದು ಆ್ಯಂಬ್ಯುಲೆನ್ಸ್ ಇತರ ವಾಹನಗಳಲ್ಲಿ ಸುಳ್ಯ ಆಸ್ಪತ್ರೆಗೆಂದು ಸಾಗಿಸಿದರು. ಆದರೆ; ಗಂಭೀರವಾಗಿ ಗಾಯಗೊಂಡಿದ್ದ ಮಕ್ಕಳು ಹಾಗೂ ಮಹಿಳೆಯರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕ ಬಿಯಾನ್ ಗೌಡ(೬) ಹಾಗೂ ಮಂಜುನಾಥ್(೪೦) ಚಿಂತಾಜನಕ ಸ್ಥಿತಿಯಲ್ಲಿದ್ದು, ಬಾಲಕನಿಗೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ತೀರ್ವ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ್ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಕಾರಿನಲ್ಲಿದ್ದ ಎರಡು ಸಂಸಾರ

ಮಳವಳ್ಳಿಯಲ್ಲಿ ಕಾರು ಬಾಡಿಗೆಗೆ ಚಾಲಿಸುತ್ತಿದ್ದ ಕುಮಾರ ತನ್ನ ಪತ್ನಿ ಶಿಲ್ಪ, ಮಕ್ಕಳಾದ ಯಶಸ್ ಗೌಡ, ಬಿಯಾನ್ ಗೌಡ ಹಾಗೂ ನಿಶಿಕಾ ಳೊಂದಿಗೆ ಕಾರಿನಲ್ಲಿ ಹೊರಟಿದ್ದರು. ಇವರೊಂದಿಗೆ ಕುಮಾರನ ಸ್ನೇಹಿತ ಮಂಡ್ಯ ಗಾಂದಿನಗರದ ಮಂಜುನಾಥ, ಅವರ ಪತ್ನಿ ಪ್ರಿಯಾಂಕ, ಮಗಳು ಮನುಶ್ರೀ ಅವರುಗಳು ಇದ್ದರು. ಸಂತೋಷದಿAದ ತೆರಳುತ್ತಿದ್ದ ಎರಡು ಸಂಸಾರದ ಪಾಲಿಗೆ ತಾವು ಪ್ರಯಾಣಿಸುತ್ತಿದ್ದ ವಾಹನವೇ ಯಮರೂಪಿಯಾಗಿ ಪರಿಣಮಿಸಿದ್ದು ದುರಂತವೇ ಸರಿ..!

ಸುಳಿವಿಗಾಗಿ ಪರದಾಟ

ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಸಾನ್ನಪ್ಪಿದರೆ, ಬಾಕಿ ಉಳಿದ ಈರ್ವರು ಪ್ರಜ್ಞಾಹೀನರಾಗಿದ್ದುದರಿಂದ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಕಾರಿನಲ್ಲಿದವರ ಬಳಿಯಿದ್ದ ಮೊಬೈಲ್ ಸಿಕ್ಕಿದವಾದರೂ ಐದು ಮೊಬೈಲ್ ಕೂಡ ಲಾಕ್ ಆಗಿದ್ದವು. ಹಾಗಾಗಿ ಮೃತಪಟ್ಟವರ ಹಾಗೂ ಗಾಯ ಗೊಂಡವರ ಬಗ್ಗೆ ಸುಳಿವಿಗಾಗಿ ಪೊಲೀಸರು, ಸಾರ್ವಜನಿಕರು ಪರದಾಡುವಂತಾಯಿತು. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರರಾಜ್ ಘಟನಾ ಸ್ಥಳ ಹಾಗೂ ಸುಳ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಳ್ಯ ಎಸ್.ಐ. ದಿಲೀಪ್ ಕುಮಾರ್, ಮತ್ತು ಸಿಬ್ಬಂದಿಗಳು ಇದ್ದರು.

? ಕುಡೆಕಲ್ ಸಂತೋಷ್

ಮಾಹಿತಿ, ಸಹಕಾರ: ಶಭರೀಶ್ ಕುದ್ಕುಳಿ, ಗಿರೀಶ್ ಪೆರುಮುಂಡ, ಅನಂತ್ ಊರುಬೈಲು.