ಕೂಡಿಗೆ, ಏ. ೧೩: ವಿಧಾನ ಸಭೆಯ ಚುನಾವಣೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಕೊಡಗಿನ ಗಡಿ ಭಾಗವಾದ ಶಿರಂಗಾಲ ಅರಣ್ಯ ತಪಾಸಣೆಯ ಗೇಟ್‌ನಲ್ಲಿ ಹಾಸನ ಹೆದ್ದಾರಿಯ ಮುಖೇನ ಹಾಸನದ ಕಡೆಯಿಂದ ಜಿಲ್ಲೆಗೆ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಅಧಿಕಾರಿ ವರ್ಗದವರು ತಪಾಸಣೆ ಮಾಡುತ್ತಿದ್ದಾರೆ.

ಶಿರಂಗಾಲ ಗೇಟ್‌ನಲ್ಲಿ ಕೇಂದ್ರ ಭದ್ರತಾ ಪಡೆಯ ಸಿಐಎಸ್‌ಎಫ್ ಪಡೆಯ ಎಂಟು ಸಿಬ್ಬಂದಿಗಳು ಮತ್ತು ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಸಿಬ್ಬಂದಿ ವರ್ಗದವರು, ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳನ್ನು ವಿವಿಧ ಹಂತಗಳಲ್ಲಿ ತಪಾಸಣೆ ನಡೆಸಲು ನಿಯೋಜನೆ ಮಾಡಲಾಗಿದೆ.