ಮಡಿಕೇರಿ, ಏ. ೧೩: ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷರಾಗಿರುವ ವಕೀಲ ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಆರೋಪ ವ್ಯಕ್ತಗೊಂಡಿದ್ದು, ಈ ಬಗ್ಗೆ ಅವರು ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುAಡೇಟಿನಿAದ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಘಟನೆಯ ಕುರಿತಾಗಿ ಪೊಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ೬.೩೦ರ ವೇಳೆಗೆ ಚೆಟ್ಟಳ್ಳಿ ಅಬ್ಯಾಲ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕೃಷ್ಣಮೂತಿ ಅವರು ನಿನ್ನೆ ಸಂಜೆ ಮಡಿಕೇರಿಯಿಂದ ಚೆಟ್ಟಳ್ಳಿಗೆ ಸಹದ್ಯೋಗಿ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರ ಬಳಿ ತೆರಳಿದ್ದರು. ಬಳಿಕ ಕಂಠಿ ಕಾರ್ಯಪ್ಪರೊಂದಿಗೆ ಕುಶಾಲನಗರಕ್ಕೆ ಹೋಗಿದ್ದು, ಅವರನ್ನು ರಾತ್ರಿ ೧೧ ಗಂಟೆ ಸಮಯದಲ್ಲಿ ಅಬ್ಯಾಲಕ್ಕೆ ಬಿಟ್ಟು ಬರುವಾಗ ಕಾರಿನ ಮೇಲೆ ಗುಂಡು ಹಾರಿಸಲಾಗಿದೆ ಎಂಬುದು ಆರೋಪವಾಗಿದೆ.

ಮಾರುತಿ ಡಿಸೈರ್ ಕಾರಿಗೆ ಫಟಾರ್ ಎಂಬ ಶಬ್ಧದೊಂದಿಗೆ ಗುಂಡು ಹಾರಿಸಲಾಗಿದೆ. ಕಾರಿನ ಎಡಭಾಗದ ಗಾಜು ಪುಡಿಯಾಗಿ ಡೋರಿನ ಒಳಗಿನ ಫೈಬರ್ ತೂತಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಘಟನೆಯನ್ನು ಅರಿತು ತಕ್ಷಣ ವೇಗವಾಗಿ ಕಾರು ಚಲಾಯಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಎಫ್‌ಐಆರ್ ದಾಖಲಾಗಿದ್ದು, ಪೊಲೀಸ್ ತನಿಖೆ ಮುಂದುವರಿಯುತ್ತಿದೆ. ಸ್ಥಳಕ್ಕೆ ಎಸ್ಪಿ ಕೆ. ರಾಮರಾಜನ್, ಡಿವೈಎಸ್‌ಪಿ ಜಗದೀಶ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬೋಪಯ್ಯ ಖಂಡನೆ: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೃಷ್ಣಮೂರ್ತಿ ಅವರ ಮೇಲಿನ ದಾಳಿ ಅತ್ಯಂತ ಹೇಯ ಹಾಗೂ ಹೇಡಿತನದ ಕೆಲಸ. ಧರ್ಮ ರಕ್ಷಣೆಯ ಕಾರ್ಯವನ್ನು

(ಮೊದಲ ಪುಟದಿಂದ) ಪ್ರಾಮಾಣಿಕವಾಗಿ ಮಾಡುತ್ತಾ ಒಬ್ಬ ಸಾಮಾಜಿಕ ಕಾಳಜಿ ಹೊಂದಿದ್ದ ವ್ಯಕ್ತಿಯ ಮೇಲಿನ ದಾಳಿ ಖಂಡನೀಯ. ಇದು ದೇಶ ವಿದ್ರೋಹಿಗಳ ಪೂರ್ವ ನಿಯೋಜಿತ ಸಂಚು. ಶೀಘ್ರವೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತಾಗಬೇಕು. ಕೃತ್ಯಕ್ಕೆ ಕಾರಣಕರ್ತರಾದವರನ್ನು ಬಂಧಿಸಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಒತ್ತಾಯಿಸಿದ್ದಾರೆ.

ರಂಜನ್ ಒತ್ತಾಯ: ಶಾಸಕ ಅಪ್ಪಚ್ಚು ರಂಜನ್ ಅವರೂ ಘಟನೆಯನ್ನು ಖಂಡಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಕೀಲರಿಂದ ಪ್ರತಿಭಟನೆ

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ, ವಕೀಲ ಕೃಷ್ಣಮೂರ್ತಿ ಅವರ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಆರೋಪಿಯನ್ನು ತಕ್ಷಣ ಬಂಧಿಸುವAತೆ ಮಡಿಕೇರಿಯ ವಕೀಲರು ಒತ್ತಾಯಿಸಿದರು.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು. ಕೋರ್ಟ್ ಕಲಾಪಕ್ಕೆ ವಕೀಲರು ಗೈರಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ್ ಮಾತನಾಡಿ, ದುಷ್ಕರ್ಮಿಗಳು ಕೃಷ್ಣಮೂರ್ತಿ ಅವರು ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಗುಂಡಿನ ದಾಳಿ ನಡೆಸಿದ್ದು, ಇದು ಖಂಡನೀಯ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ತಕ್ಷಣ ಬಂಧಿಸುವAತೆ ಆಗ್ರಹಿಸಿದರು.

ಆ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರನ್ನು ಭೇಟಿಯಾದ ಸಂಘದ ಪದಾಧಿಕಾರಿಗಳು ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿದರು.

ಘಟನೆಯನ್ನು ಖಂಡಿಸಿರುವ ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಉಪಾಧ್ಯಕ್ಷ ರತನ್ ತಮ್ಮಯ್ಯ, ಕಾರ್ಯದರ್ಶಿ ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸಂಜಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿಶ್ವ ಹಿಂದೂ ಪರಿಷತ್ ಖಂಡನೆ

ಗುAಡಿನ ದಾಳಿ ಪ್ರಕರಣವನ್ನು ವಿಹೆಚ್‌ಪಿಯ ಜಿಲ್ಲಾ ಘಟಕ ಖಂಡಿಸಿದೆ. ವೃತ್ತಿಪರ ಅಥವಾ ಸಂಘಟನೆಯ ದ್ವೇಷ ಯಾವುದೇ ಇದ್ದರು ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ. ಗುಂಡು ಹಾರಿಸಿದವರನ್ನು ಶೀಘ್ರ ಬಂಧಿಸಬೇಕು ಮತ್ತು ಕೃಷ್ಣಮೂರ್ತಿ ಅವರಿಗೆ ಪೊಲೀಸರು ಸೂಕ್ತ ಭದ್ರತೆಯನ್ನು ನೀಡಬೇಕು ಎಂದು ವಿಹೆಚ್‌ಪಿ ಒತ್ತಾಯಿಸಿದೆ. ದುಷ್ಕರ್ಮಿಗಳ ಬಂಧನವಾಗದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ವಕೀಲರ ಸಂಘ ಖಂಡನೆ

ಕುಶಾಲನಗರ: ಮಡಿಕೇರಿ ಚೆಟ್ಟಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ವಕೀಲ ಕೃಷ್ಣಮೂರ್ತಿ ಅವರ ಕಾರಿಗೆ ಗುಂಡು ಹಾರಿಸಿರುವ ಪ್ರಕರಣವನ್ನು ಕುಶಾಲನಗರ ವಕೀಲರ ಸಂಘ ಖಂಡಿಸಿದೆ.

ಕರ್ನಾಟಕ ಸರ್ಕಾರ ತಕ್ಷಣ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ಆಗ್ರಹಿಸಿದ್ದಾರೆ. ವಕೀಲರ ಮೇಲೆ ನಿರಂತರವಾಗಿ ಹಲ್ಲೆಯಾಗುತ್ತಿದೆ. ಯಾವುದೇ ತರಹದ ರಕ್ಷಣೆ ಇಲ್ಲ. ಇಂತಹ ಪ್ರಕರಣಗಳು ಮರುಕಳಿಸದ ರೀತಿಯಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಸಂಘದ ಕಾರ್ಯದರ್ಶಿ ಕೆ.ಬಿ.ಮೋಹನ್ ಇತರರು ಇದ್ದರು.