ಮಡಿಕೇರಿ, ಏ. ೧೩: ಕಡಗದಾಳು ಗ್ರಾಮದ ಶ್ರೀ ಪನ್ನಂಗಾಲತಮ್ಮೆ ದೇವಸ್ಥಾನದ ವಾರ್ಷಿಕ ಉತ್ಸವವು ತಾ. ೧೫ರಿಂದ ತಾ. ೧೭ರವರೆಗೆ ನಡೆಯಲಿದೆ.

ತಾ. ೧೫ರಂದು ಅಮ್ಮೆ, ದೇವರ ಕೊಡೆ, ಚವುಂಡಿ, ಅಯ್ಯಪ್ಪ, ಕುರುಂದ ದೇವರುಗಳ ಉತ್ಸವ, ಎತ್ತು ಪೋರಾಟ, ಕುರುಂದಕಳಿ, ರಾತ್ರಿ ಚವುಂಡಿ ಭಾರಣಿ, ತಾ. ೧೬ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ನಂತರ ದೇವಿಯ ಅವಭೃತ ಸ್ನಾನ, ತಾ. ೧೭ರಂದು ಬೆಳಿಗ್ಗೆ ದೇವರ ನುಡಿ ಕೇಳುವುದು, ಹರಕೆ ಒಪ್ಪಿಸುವುದು, ಭಂಡಾರ ನೋಡುವ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.