*ಗೋಣಿಕೊಪ್ಪ, ಏ. ೧೩: ಕೈಕೇರಿ ಶ್ರೀ ಪನ್ನಂಗಾಲತಮ್ಮೆ ಮಂದಣ್ಣ ಮೂರ್ತಿ ಅಯ್ಯಪ್ಪ ಚಾಮುಂಡಿ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಪುರಾತನ ಇತಿಹಾಸ ಹೊಂದಿರುವ ಕೈಕೇರಿಯಲ್ಲಿ ಪ್ರತಿಷ್ಠಾಪನೆಗೊಂಡ ದೇವಾಲಯದಲ್ಲಿ ಮೂರು ದಿನಗಳು ಭಕ್ತಿ ಪೂರ್ವಕವಾಗಿ ಉತ್ಸವ ಆಚರಣೆ ನಡೆಯಿತು.

ಎಂಟು ದಿನಗಳು ಶ್ರದ್ಧಾ ಭಕ್ತಿಯಿಂದ ಪ್ರತಿನಿತ್ಯ ಭಕ್ತಾದಿಗಳು ಪುರಾತನ ಹಿನ್ನೆಲೆಯ ಆಚರಣೆಯೊಂದಿಗೆ ದೇವರ ಉತ್ಸವವನ್ನು ನಡೆಸಿದರು. ಅಜ್ಜಪ್ಪ ತೆರೆ, ಚಾಮುಂಡಿ ದೇವಿಗೆ ಹರಕೆ, ಅಯ್ಯಪ್ಪ, ನೀಲಿದೇವ, ಪೊದದೇವ ಕಳಿ, ಪೊಲದೇವರುಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.