ಭಾಗಮಂಡಲ, ಏ. ೧೩: ಇಲ್ಲಿನ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿರುವ ಗೌಡ ಕುಟುಂಬಗಳ ನಡುವಿನ ಕುದುಕುಳಿ ಐನ್‌ಮನೆ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಮೊದಲ ಕ್ವಾಟರ್ ಫೈನಲ್ ಪಂದ್ಯ ಹೊಸೊಕ್ಲು ಮತ್ತು ಇಳಂದಿಲ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಇಳಂದಿಲ ತಂಡ ೬೧ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಹೊಸೊಕ್ಲು ತಂಡ ಒಂಭತ್ತು ವಿಕೆಟ್‌ಗಳಿಂದ ಜಯಗಳಿಸಿತು. ಪೊನ್ನಚನ ಮತ್ತು ಎಡಿಕೇರಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೊನ್ನಚನ ತಂಡ ೧೦೨ ರನ್ ಗಳಿಸಿ ಎದುರಾಳಿ ಎಡಿಕೇರಿ ತಂಡಕ್ಕೆ ೧೦೩ ರನ್‌ಗಳ ಗುರಿ ನೀಡಿತು. ಎಡಿಕೇರಿ ತಂಡದ ಮನೋಜ್ ೯ ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳ ಸಹಿತ ೮೧ ರನ್ ಮಾಡಿ ಒಂಭತ್ತು ವಿಕೆಟ್‌ಗಳಿಂದ ಒಂದು ಓವರ್ ಬಾಕಿ ಇರುವಂತೆ ಗೆಲುವು ಸಾಧಿಸಿತು.